ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲಾದ್ಯಂತ ಬಿರುಸಿನ ಮತದಾನವಾಗಿದ್ದು, ಶೇ. 74.33ಮತದಾನ ದಾಖಲಾಗಿದೆ. ಜಿಲ್ಲೆಯಲ್ಲಿ 826684 ಜನರು ತಮ್ಮ ಮತ ಚಲಾಯಿಸಿದ್ದು, ಇವರಲ್ಲಿ 373063ಮಂದಿ ಪುರುಷ ಮತದಾರರು, 453619 ಮಹಿಳಾ ಮತದಾರರು ಮತ್ತು ಇಬ್ಬರು ಟ್ರಾನ್ಸ್‍ಜೆಂಡರ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಮತದಾರರ 1112190 ಮಂದಿ ಮತದಾರರಿದ್ದಾರೆ.
ಕೆಲವೊಂದು ಮತಗಟ್ಟೆಗಳಲ್ಲಿ ಮತಯಂತ್ರಗಳ ಸಮಸ್ಯೆ ಎದುರಾಗಿದ್ದರೆ, ಕೆಲವು ಮತಗಟ್ಟೆಗಳಲ್ಲಿ ಮತದಾರರ ಸರತಿ ಸಾಲುಗಳಿದ್ದ ಕಾರಣ 6ಗಂಟೆಯ ನಂತರವೂ ಮತದಾನ ಮುಂದುವರಿದಿತ್ತು.
ಕಾಞಂಗಾಡು ನಗರಭೆ (74.21ಶೇ), ಕಾಸರಗೋಡು ನಗರಸಭೆ (67.73ಶೇ.), ನೀಲೇಶ್ವರ ನಗರಸಭೆ (78.32ಶೇ.)ಮತದಾನವಾಗಿದೆ. ಬ್ಲಾಕ್ ಪಂಚಾಯಿತಿಗಳ ಪೈಕಿ ಮಂಜೇಶ್ವರ (71.07 ಶೇ), ಕಾಸರಗೋಡು (71.32ಶೇ), ಕಾರಡ್ಕ (78.43ಶೇ.), ಪರಪ್ಪ (75.18ಶೇ.), ಕಾಞಂಗಾಡು (75.14ಶೇ.), ನೀಲೇಶ್ವರ (79.97ಶೇ. )ಮತದಾನವಾಗಿದೆ.
ಜಿಲ್ಲೆಯ ಮಂಗಲ್ಪಾಡಿ ಮತ್ತು ಮಡಿಕೈ ಗ್ರಾಮ ಪಂಚಾಯಿತಿಯ ತಲಾ ಒಂದು ವಾರ್ಡಿನಲ್ಲಿ ಅವಿರೋಧ ಆಯ್ಕೆ ನಡೆದಿರುವ ಹಿನ್ನೆಲೆಯಲ್ಲಿ ಇಲ್ಲಿ ಮತದಾನ ನಡೆದಿರಲಿಲ್ಲ.
ಕಣ್ಣೂರು ಜಿಲ್ಲೆಯಲ್ಲಿ ಶೇ. 74.64, ಕೋಯಿಕ್ಕೋಡು ಶೇ. 75.73, ವಯನಾಡು ಶೇ. 76.25, ಮಲಪ್ಪುರಂ ಶೇ.76.11, ತೃಶ್ಯೂರ್ ಶೇ. 71.14, ಪಾಲಕ್ಕಾಡ್ ಶೇ. 74.89 ಮತದಾನವಾಗಿದೆ.

