ಕಾಸರಗೋಡು: ಕಾಸರಗೋಡು ಜಿಒಲ್ಲೆಯ ಹಿರಿಯ ಮತದಾರ ವೆಂಕಪ್ಪ ನಾಯ್ಕ ಈ ಬಾರಿಯೂ ಮತ ಚಲಾಯಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಅತ್ಯಂತ ಹಿರಿಯ ಮತದಾರ ವೆಂಕಪ್ಪ ನಾಯ್ಕ ಅವರಿಗೆ ಈಗ 105 ವರ್ಷ. ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಅವರು ಮತ ಚಲಾಯಿಸಿದ್ದರು. ವೃದ್ಧಾಪ್ಯದ ಕಾರಣದಿಂದಾಗಿ ಅನೇಕ ದೈಹಿಕ ವೈಕಲ್ಯಗಳಿದ್ದರೂ, ಮತದಾನದ ಉತ್ಸಾಹ ಇನ್ನೂ ಕುಂದದೆ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿದ್ದರು. ಪನತ್ತಡಿ ಗ್ರಾಮ ಪಂಚಾಯತಿಯ ಮೂರನೇ ವಾರ್ಡ್ ನಲ್ಲಿರುವ ಚಾಮುಂಡಿಕುನ್ನು ಶಾಲೆಯಲ್ಲಿ ವೆಂಕಪ್ಪ ನಾಯ್ಕ ಅವರು ತಮ್ಮ ಕುಟುಂಬದೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ತಮ್ಮ ಮನೆಯಿಂದಲೇ ಮತ ಚಲಾಯಿಸಿದ್ದರು.




