ಕಾಸರಗೋಡು: ನಗರದ ನಾಗರಕಟ್ಟೆಯಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸ್ಮಾರಕ "ಪ್ರಾರ್ಥನಾ ಮಂಟಪ "ದ ಲೋಕಾರ್ಪಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಶ್ರೀಎಡನೀರು ಮಠದಲ್ಲಿ ನೆರವೇರಿತು. .
ಎಡನಿರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. "ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಡಾ. ವಾಮನ್ ರಾವ್ ಬೇಕಲ್-ಸಂಧ್ಯಾರಾಣಿ, ಸನತ್ ಕುಮಾರ್ ಬಿ. ಇ. ಮತ್ತು ಕಾರ್ತಿಕ್ ಕಾಸರಗೋಡು ಇವರ ಆರ್ಥಿಕ ಸಹಕಾರದಲ್ಲಿ "ಪ್ರಾರ್ಥನಾ ಮಂಟಪ ನಿರ್ಮಿಸಲಾಗಿದೆ. ಡಿ. 4ರಂದು ಸಂಜೆ 4ಕ್ಕೆ ನಡೆಯುವ ಸಮಾರಂಭದಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ "ಪ್ರಾರ್ಥನಾ ಮಂಟಪ "ಉದ್ಘಾಟಿಸುವರು. ವಿಶ್ವ ರಾಮಕ್ಷತ್ರಿಯ ಮಹಾಸಂಘ ಉಪಾಧ್ಯಕ್ಷ ನಾಗರಾಜ್ ಕಾಮಧೇನು ಕುಂದಾಪುರ ಪ್ರಾರ್ಥನಾ ಮಂಟಪ ಲೋಕಾರ್ಪಣೆಗೈಯುವರು. ಈ ಸಂದರ್ಭ ಕನ್ನಡ ಭವನದ ಹಿತೈಷಿಗಳು, ಪಧಾಧಿಕಾರಿಗಳು ಭಾಗವಹಿಸಿ ಶ್ರೀ ಭಿಕ್ಷು ಪ್ರತಿಮೆಗೆ ಹಾರಾರ್ಪಣೆ ಮಾಡಲಿರುವರು.





