ಕಾಸರಗೋಡು: ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಐ. ರಾಮ ರೈ ಅವರ 15ನೇ ಪುಣ್ಯತಿಥಿಯನ್ನು ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಡಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಪುಷ್ಪಾರ್ಚನೆ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಚಆಲನೆ ನೀಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿಕೊಟ್ಟವರಲ್ಲಿ ಐ. ರಾಮ ರೈ ಅವರ ಪಾತ್ರ ಮಹತ್ತರವಾಗಿದೆ. ಸಂಸದರಾಗಿ ಜಿಲ್ಲೆಯಲ್ಲಿ ನಡೆಸಿರುವ ಅಭಿವೃದ್ಧಿಕಾರ್ಯಗಳು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆಯೊದಗಿಸಿಕೊಟ್ಟಿರುವುದಾಗಿ ತಿಳಿಸಿದರು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಸಿ. ಪ್ರಭಾಕರನ್, ಮುಖಂಡರಾದ ಎಂ.ರಾಜೀವನ್ ನಂಬಿಯಾರ್, ವಿ.ಗೋಪಕುಮಾರ್, ಎ.ವಾಸುದೇವನ್, ಅರ್ಜುನನ್ ತಾಯಲಂಗಾಡಿ, ರಂಜಿತ್ ಮಳಮಕಾಯಿ, ಸೀತಾರಾಮ್ ಮಾಸ್ಟರ್ ಉಪಸ್ಥಿತರಿದ್ದರು.





