ಪೆರ್ಲ: ಕರ್ನಾಟಕ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಎಣ್ಮಕಜೆ ಪಂಚಾಯತಿ£ಯ ವಿವಿಧೆಡೆ "ಕುಟುಂಬ ಸಂಗಮ" ಕಾರ್ಯಕ್ರಮದಲ್ಲಿಪಾಲ್ಗೊಂಡರು. ಕುಟುಂಬ ಸಂಗಮದ ಸಮಾರೋಪ ಸಮಾರಂಭ ಅಂಗವಾಗಿ ಅಡ್ಯನಡ್ಕ ಪೇಟೆಯಲ್ಲಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.
ಬಿಜೆಪಿ ಹಿರಿಯ ನೇತಾರ, ಚವರ್ಕಾಡು ಕಂಚಿಮೂಲೆ ನಿವಾಸಿ ಶೀನ ನಾಯ್ಕ ಅವರ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ವಾರ್ಡಿನ ಅಬ್ಯರ್ಥಿ ಪದ್ಮಾವತಿ .ಕೆ ಅವರು ವಂದೇ ಮಾತರಂ ಹಾಡಿನ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಬಲಿದಾನಿ ಕೆ.ಟಿ ಜಯಕೃಷ್ಣನ್ ಮಾಸ್ಟರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು, ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ನೂರಾರು ಮಂದಿಕಾರ್ಯಕರ್ತರ ಬಲಿದಾನದ ಮೂಲಕ ಕೇರಳದಲ್ಲಿ ಪಕ್ಷ ಸಂಘಟನೆ ಬಲಿಷ್ಠವಾಗಿ ನೆಲೆಯೂರಿದ್ದು, ಪಕ್ಷದ ಅಭೂತಪೂರ್ವ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು. ಸಾಯ ಹಾಗೂ ಚವರ್ಕಾಡು ವಾರ್ಡಿನ ಅಭ್ಯರ್ಥಿಗಳಾದ ಪದ್ಮಾವತಿ ಕೆ ಮತ್ತು ರಾಮ ನಾಯ್ಕ, ನೇತಾರಾದ ನಾರಾಯಣ ನಾಯ್ಕ, ಸುಮಿತ್ ರಾಜ್, ಜಿಲ್ಲಾ ಪಂಚಾಯಿತಿ ಅಭ್ಯರ್ಥಿ ಮಣಿಕಂಠ ರೈ ಉಪಸ್ಥಿತರಿದ್ದರು.





