ಕಾಸರಗೋಡು: ನಗರಸಭಾ ವ್ಯಾಪ್ತಿಯ ಕೊಳಕ್ಕೆಬೈಲು ನಿವಾಸಿ ದಿ. ಗಣಪತಿ ಆಚಾರ್ಯ ಅವರ ಪತ್ನಿ ಪುಷ್ಪಾ ಅವರ ಹೆಂಚುಹಾಸಿನ ಮನೆಗೆ ಬೆಂಕಿ ತಗುಲಿ ಆಂಶಿಕ ಹಾನಿಯುಂಟಾಗಿದೆ. ಮಂಗಳವಾರ ಬೆಳಗ್ಗೆ ಅಗ್ನಿ ಆಕಸ್ಮಿಕವುಂಟಾಗಿದ್ದು,ಮೇಲಿನ ಮಹಡಿ ಸಂಪೂರ್ಣ ಉರಿದುನಾಶಗೊಂಡಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಶಮನಗೊಳಿಸಿಹೆಚ್ಚಿನ ದುರಂತ ತಪ್ಪಿಸಿದ್ದಾರೆ. ನಗರಸಭಾ ಸದಸ್ಯ ಪಿ. ರಮೇಶ್ ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿದರು. ಮನೆ ಬೆಂಕಿಗಾಹುತಿಯಾಗಿರುವುದರಿಂದ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ.

