ಕಾಸರಗೋಡು: ಸಾಮಗ್ರಿ ವಿತರಕರ ವಾಹನಗಳು ಅಂಗಡಿಗಳಿಗೆ ಸರಕು ಪೂರೈಸುತ್ತಿರುವ ಸಂದರ್ಭ ಪಾಕಿರ್ಂಗ್ ಹೆಸರಲ್ಲಿ ಅನಗತ್ಯ ದಂಡ ಹೇರಿಕೆಯನ್ನು ತಕ್ಷಣ ಕೈಬಿಡುವಂತೆ ಆಲ್ ಕೇರಳ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್‍ನ ವಾರ್ಷಿಕ ಮಹಾಸಭೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಪೆÇಲೀಸರನ್ನು ವಿನಂತಿಸಿದೆ. ಈ ಬಗ್ಗೆ ಸಂಘಟನೆ ಪದಾಧಿಖಾರಿಗಳ ಸಭೆ ಆಯೋಜಿಸುವಂತೆಯೂ ಒತ್ತಾಯಿಸಲಾಯಿತು.
ಕಾಸರಗೋಡಿನಲ್ಲಿ ನಡೆದ ಸಂಘಟನೆ ಸಮಾವೇಶದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಕೆವಿವಿಇಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ ಕೆ. ಅಹ್ಮದ್ ಷರೀಫ್ ಸಮಾರಂಭ ಉದ್ಘಾಟಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಕೆ. ರಾಜೇಶ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಎಕೆಡಿಎ ರಾಜ್ಯ ಕಾರ್ಯಾಧ್ಯಕ್ಷ ಟಿ.ಟಿ. ಅಹಮದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿನು ಮಞËಲಿ, ರಾಜ್ಯ ಉಪಾಧ್ಯಕ್ಷರಾದ ರಾಜನ್ ತೀಯೇರತ್, ಮಾಹಿನ್ ಕೋಳಿಕ್ಕರ, ರಾಜ್ಯ ಸಮಿತಿ ಕಾರ್ಯದರ್ಶಿ ಸದಸ್ಯ ಶಶಿಧರನ್ ಜಿ.ಎಸ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ರಾಹುಲ್ ನಂದಕುಮಾರ್, ಜಿಲ್ಲಾ ಕೋಶಾಧಿಕಾರಿ ಮುನೀರ್ ಬಿಸ್ಮಿಲ್ಲಾ, ಜಿಲ್ಲಾ ಉಪಾಧ್ಯಕ್ಷರಾದ ಶಶಿಧರನ್ ಕೆ., ಜಲೀಲ್ ತಚ್ಚಂಗಾಡ್, ಅಸ್ಲಂ ಸ್ಟಾರ್, ಕಾರ್ಯದರ್ಶಿಗಳಾದ ಜಮ್ಶೀದ್, ಮುತಾಲಿಬ್ ಬೇರ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಪಿ.ಕೆ. ರಾಜನ್, ಟಿ.ಎ. ಇಲ್ಯಾಸ್, ಮುಹಮ್ಮದಲಿ ಮುಂಡಂಕುಳಂ, ಬಾಲಕೃಷ್ಣನ್ ರಿಯಲ್, ಮತ್ತು ವಿಶ್ವನಾಥನ್ ಕೆ. ಉಪಸ್ಥಿತರಿದ್ದರು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಶಶಿಧರನ್ ಜಿ.ಎಸ್ ಅಧ್ಯಕ್ಷ, ಮುನೀರ್ ಬಿಸ್ಮಿಲ್ಲಾ ಪ್ರಧಾನ ಕಾರ್ಯದರ್ಶಿ, ಅಸ್ಲಂ ಸ್ಟಾರ್ ಕೋಶಾಧಿಕಾರಿ, ಜಲೀಲ್ ತಚಂಗಾಡ್, ಶಶಿಧರನ್ ಕೆ., ಡಾ.ರಾಹುಲ್ ನಂದಕುಮಾರ್, ಟಿ.ಶಂಸುದ್ದೀನ್ ನೀಲೇಶ್ವರ ಉಪಾಧ್ಯಕ್ಷರು, ನವಾಜ್ ಸನಾ, ಎಂ.ಎಸ್. ಜಮ್ಶೀದ್, ಮುತ್ತಲಿಬ್ ಬೇರ್ಕ, ರಿಯಲ್ ಬಾಲಕೃಷ್ಣನ್ ಕಾರ್ಯದರ್ಶಿಗಳು, ಮಾಹಿನ್ ಕೋಳಿಕ್ಕರ ಕೆ.ರಾಜೇಶ್ ಕಾಮತ್, ಪಿ.ಕೆ. ರಾಜನ್ ರಕ್ಷಾಧಿಕಾರಿಗಳು, ಟಿ.ಎ. ಇಲ್ಯಾಸ್, ಮುಹಮ್ಮದಲಿ ಮುಂಡಂಕುಳಂ, ವಿಶ್ವನಾಥನ್, ಗಿರೀಶ್ ನಾಯಕ್ ಅವರನ್ನು ಕಾರ್ಯದರ್ಶಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.


