ಮಂಜೇಶ್ವರ: ನಿತಿನ್ ಕುಮಾರ್ ತೆಂಕಕಾರಂದೂರು ಕತೆ ಸಂಯೋಜಿಸಿ ಗಡಿನಾಡಿನ ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ ಪ್ರಸಂಗ ರಚಿಸಿರುವ ಶ್ರೀ ಶಬರಿಮಲೆ ಕ್ಷೇತ್ರ ಮಹಾತ್ಮೆ ನೂತನ ಯಕ್ಷಗಾನ ಪ್ರಸಂಗದ ಬಿಡುಗಡೆ ಹಾಗೂ ಪ್ರಥಮ ಪ್ರದರ್ಶನ ಇತ್ತೀಚೆಗೆ ಕನ್ನಡ ಭವನ ಮೂಡಬಿದ್ರೆಯ ಸಭಾಂಗಣದಲ್ಲಿ ಜರಗಿತು. ಐವತ್ತು ಕಲಾವಿದರು ಪ್ರದರ್ಶನದಲ್ಲಿ ಭಾಗವಹಿಸಿದ್ದು ಈ ವರ್ಷ ಗೆಜ್ಜೆಗಿರಿ ಮೇಳದಲ್ಲಿ ಶಬರಿಮಲೆ ಕ್ಷೇತ್ರ ಮಹಾತ್ಮೆ ಪ್ರದರ್ಶನ ಗೊಳ್ಳಲಿದೆ.




