ಮಂಜೇಶ್ವರ: ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢಶಾಲೆ ಮೀಯಪದವು, ಎಂಡೋಡಯಾಬ್ ಚಾರಿಟಬಲ್ ಸೊಸೈಟಿ ಮಂಗಳೂರು, ವಿಕಾಸ ಮೀಯಪದವು ಇವರ ಸಂಯುಕ್ತ ಸಹಯೋಗದಲ್ಲಿ ಹಿರಿಯ ವೈದ್ಯ, ಸಾಮಾಜಿಕ ಮುಂದಾಳು ಹಾಗೂ ಶ್ರೀ ಸಾಯಿ ನಿಕೇತನ ಸೇವಾಶ್ರಮ ದೈಗೋಳಿ ಇದರ ಸಂಚಾಲಕ ಡಾ.ಉದಯಕುಮಾರ್ ಹಾಗೂ ಡಾ ಶಾರದಾ ಭಟ್ ವೈದ್ಯ ದಂಪತಿಗಳಿಗೆ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಹಾಗೂ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಸಮ್ಮುಖದಲ್ಲಿ ಆಶೀರ್ವಚನ ಪೂರ್ವಕ ಗೌರವಾರ್ಪಣೆ ಭಾನುವಾರ ಸಾಯಿನಿಕೇತನ ಸೇವಾಶ್ರಮದಲ್ಲಿ ನಡೆಯಿತು.
ಖ್ಯಾತ ವೈದ್ಯ ಹೆಚ್.ಕೆ. ಗಣೇಶ್ (ಎಂಡೋಡಯಾಬ್ ಚಾರಿಟಬಲ್ ಸೊಸೈಟಿ ಮಂಗಳೂರು) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಸಂಚಾಲಕ ಡಾ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಶ್ರೀ ವಿದ್ಯಾವರ್ಧಕ ಪ್ರೌಢ ಶಾಲಾ ಶಿಕ್ಷಕ ಕಿರಣ್ ಕುದ್ರೆಕೋಡ್ಲು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಶಿಕ್ಷಕಿ ಸುಧಾ ಸನ್ಮಾನ ಪತ್ರ ವಾಚಿಸಿದರು. ಬಳಿಕ ಹನುಮಗಿರಿ ಶ್ರೀ ಕೋದಂಡರಾಮ ಕೃಪಾ ಪೆÇೀಷಿತ ಯಕ್ಷಗಾನ ಕಲಾ ಮಂಡಳಿಯವರಿಂದ ಈ ವರ್ಷದ ನೂತನ ಪ್ರಸಂಗ ವರ್ಣ ಪಲ್ಲಟ ಯಕ್ಷಗಾನ ಬಯಲಾಟ ಜರಗಿತು.

.jpg)
