ಕಾಸರಗೋಡು: ನಗರದ ಕರಂದಕ್ಕಾಡು ಶ್ರೀ ವಿಶ್ವಕರ್ಮ ಮಂದಿರದ ಸನಿಹ ನಿರ್ಮಿಸಲಿರುವ ಸಭಾಭವನದ ಶಿಲಾನ್ಯಾಸ ಸಮಾರಂಭ ನೆರವೇರಿತು. ವಾಸ್ತುಶಿಲ್ಪಿ ಮಾಯಿಪ್ಪಾಡಿ ಉದಯಕುಮಾರ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಿತು.
ಪುರೋಹಿತ ಮಾಯಿಪ್ಪಾಡಿ ಶ್ರೀ ಕೇಶವ ಆಚಾರ್ಯ ಅವರ ಪ್ರಾರ್ಥನೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಭುವನೇಶ ಆಚಾರ್ಯ ತಾಳಿಪಡ್ಪು, ಕಾರ್ಯದರ್ಶಿ ಕೆ ಜಿ ಗಣೇಶ ಆಚಾರ್ಯ ಆಚಾರ್ಯ, ಕೋಶಾಧಿಕಾರಿ ಪ್ರವೀಣ ಕುಮಾರ್ ಆಚಾರ್ಯ ನಲ್ಕ, ಕಲ್ಮಾಡಿ ಸದಾಶಿವ ಆಚಾರ್ಯ, ಪೆಣೆ9 ವಿಷ್ಣು ಆಚಾರ್ಯ, ಸುರೇಂದ್ರ ಆಚಾರ್ಯ, ಇಂಜಿನಿಯರ್ ಅವಿನಾಶ್ ಆಚಾರ್ಯ, ವೇದಾವತಿ ಸದಾಶಿವ ಆಚಾರ್ಯ, ಶೀತಲ್ ಕುಮಾರ್ ಆಚಾರ್ಯ, ತುಕಾರಾಮ ಆಚಾರ್ಯ ಕೆರೆಮನೆ, ಮೂವಾಜೆ ಸೀತಾರಾಮ ಆಚಾರ್ಯ, ವಿವಿದ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.


