ಈಗೀಗ ಕುಳಿತಲ್ಲಿಂದಲೇ ಸಾಕಷ್ಟು ಕೆಲಸಗಳನ್ನು ಮಾಡುವುದರಿಂದ ನಮ್ಮ ಆರೋಗ್ಯ ಆಗಾಗ ಹಾನಿಯಾಗುತ್ತಿರುತ್ತದೆ. ಆಹಾರ ಜೊತೆಗೆ ನಾವು ಕುಡಿಯು ನೀರು ಹಾಗೂ ಪಾನೀಯವೂ ನಮ್ಮ ಜೀರ್ಣಾಂಗದ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ದೇಹವನ್ನು ಸೇರಿದ ಆಹಾರವನ್ನು ಜೀರ್ಣ ಮಾಡಲು ನೀರು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
ಆಹಾರ ಜೀರ್ಣವಾಗಲು ತಣ್ಣನೆಯ ನೀರು ಅಥವಾ ಸಾಮಾನ್ಯವಾಗಿ ಇರುವ ನೀರು (Warm water) ಬೇಕಾಗುತ್ತಾ?. ಈ ಬಗ್ಗೆ ಉತ್ತರ ಇಲ್ಲಿದೆ.
ಮಾನವನ ದೇಹದ ಕುರುಳು ಎಷ್ಟು ಪರಿಣಾಮಕಾರಿಯಾಗಿ ಹಾಗೂ ಅರಾಮದಾಯಕವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಾವು ಕುಡಿಯುವ ನೀರಿನ ತಾಪಮಾನವು ನಿರ್ಧರಿಸುತ್ತದೆ. ಫ್ರಿಡ್ಜ್‌ನಲ್ಲಿ ಇಟ್ಟಿರುವ ನೀರು ಹಾಗೂ ಕೋಣೆಯ ಪಾತ್ರೆಯಲ್ಲಿ ಅಥವಾ ಮಡಿಕೆಯಲ್ಲಿ ಇಟ್ಟಿರುವ ನೀರು ಯಾವುದು ಉತ್ತಮ ಎಂಬುದನ್ನು ಇಲ್ಲಿ ಮಾಹಿತಿ ಇದೆ. ಜನರು ಆದಷ್ಟು ವಾರ್ಮ್ ವಾಟರ್ ಅನ್ನು ಕುಡಿಯುವುದು ಉತ್ತಮ ಎನ್ನುವುದು ಬಹುತೇಕ ಕಡೆ ವೈದ್ಯರ ಸಲಹೆಯಾಗಿರುತ್ತದೆ.
ತಣ್ಣನೆಯ ನೀರು ಅಥವಾ ಯಾವುದೇ ಪಾನೀಯವನ್ನು ಆಹಾರದಲ್ಲಿ ಜೊತೆ ಜೊತೆಗೆ ನಾವು ಕುಡಿಯುವುದರಿಂದ ಹೊಟ್ಟೆಯಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಅಂದರೆ ಹಿಗ್ಗದೇ ಕುಗ್ಗುತ್ತವೆ. ಈ ಸಮಯದಲ್ಲಿ ಕಿಣ್ವಗಳು ಚಟುವಟಿಕೆ ಕಡಿಮೆ ಆಗುತ್ತದೆ. ದೇಹದಲ್ಲಿರುವ ಕೊಬ್ಬಿನ ಅಂಶ ಐಸ್‌ನಂತೆ ಗಟ್ಟಿಯಾಗುತ್ತದೆ. ಈ ಎಲ್ಲ ಕಾರಣಗಳಿಂದ ಜೀರ್ಣಕ್ರಿಯೆ ಬಹಳ ನಿಧಾನವಾಗುತ್ತದೆ. ಕುರುಳಿನ ಚಟುವಟಿಕೆನ ನಿಧಾನಗೊಳಿಸುವುದರಿಂದ ಹೆಚ್ಚು ಹಾನಿ ಇರಲ್ಲ. ಆದರೆ ಕಿರಿ ಕಿರಿ ಉಂಟು ಮಾಡುವುದರ ಜೊತೆಗೆ ಅನಾನುಕೂಲವನ್ನು ಉಂಟು ಮಾಡುತ್ತದೆ.
ನಿಮ್ಮ ಮನೆಯ ವಾತಾವರಣಕ್ಕೆ ತಕ್ಕಂತ ನೀರು ಅಥವಾ ವಾರ್ಮ್ ವಾಟರ್‌ನಿಂದಲೇ ನಿಮ್ಮ ದಿನವನ್ನು ಆರಂಭಿಸುವುದು ಉತ್ತಮ. ಏಕೆಂದರೆ ದೇಹದಲ್ಲಿ ಜೀರ್ಣಂಗವ್ಯೂಹವನ್ನು ಹೆಚ್ಚು ಆರಾಮದಾಯಕವಾಗಿ ಕೆಲಸ ಮಾಡಲು ಈ ನೀರು ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಮಲಬದ್ಧತೆ, ಅಜೀರ್ಣ, ಸೋಮಾರಿತನವನ್ನು ಹೋಗಲಾಡಿಸಿ ಯಾವಾಗಲೂ ಆಕ್ಟಿವ್ ಆಗಿರುವಂತೆ ಮಾಡುತ್ತದೆ.

