ಕಾಸರಗೋಡು: ಒಂದೇ ದಿನ ಜನಿಸಿದ, ಒಟ್ಟಿಗೆ ಅಧ್ಯಯನ ಮಾಡಿದ, ಒಂದೇ ದಿನ ಒಂದೇ ವಿಭಾಗದಲ್ಲಿ ಮತ್ತು ಒಂದೇ ಸ್ಥಳದಲ್ಲಿ ಕೆಲಸಕ್ಕೆ ಸೇರ್ಪಡೆಗೊಳ್ಳುವ ಅವಳಿ ಸಹೋದರಿಯರು ಕೌತುಕ ಮೂಡಿಸಿದ್ದಾರೆ.
ಕಾಸರಗೋಡಿನ ಭೀಮನಡಿ ಕುರಂಕುಂಡ್‍ನ ಸ್ಥಳೀಯರಾದ ಈ ಸಹೋದರಿಯರು ಹುಟ್ಟಿನಿಂದಲೇ ಒಟ್ಟಿಗೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದವರು. 23 ನೇ ವಯಸ್ಸಿನಲ್ಲಿ ಒಟ್ಟಿಗೆ ಮುಂದುವರಿಯುತ್ತಿದ್ದಾರೆ. ಅಧ್ಯಯನದಲ್ಲಿ ಮಿತಿಗಳನ್ನು ಹೊಂದಿದ್ದ ಇಬ್ಬರೂ ಸಾಕಷ್ಟು ಪ್ರಯತ್ನದ ನಂತರ ಸರ್ಕಾರಿ ಉದ್ಯೋಗಗಳನ್ನು ಪ್ರವೇಶಿಸಲಿರುವರು.
ಕುರಂಕುಂಡ್‍ನ ಕಳರಿಮುರಿಯಲ್ಲಿರುವ ಜೋಸೆಫ್ ಮತ್ತು ಸುನಿ ಜಾರ್ಜ್ ಅವರ ಮಕ್ಕಳಾದ ಸವಿತಾ ಜೋಸೆಫ್ ಮತ್ತು ಸಂಗೀತಾ ಜೋಸೆಫ್ ಇಂದು(ಡಿಸೆಂಬರ್ 4 ರಂದು) ಜೊತೆ ಜೊತೆಗೇ ಕೆಲಸಕ್ಕೆ ಸೇರಲಿದ್ದಾರೆ. 2002ರ ಮಾರ್ಚ್ 11 ರಂದು ಜನಿಸಿದ ಸವಿತಾ ಅವರನ್ನು ಹೊಸದುರ್ಗ ಸಬ್-ಕೋರ್ಟ್‍ನಲ್ಲಿ ಕೊನೆಯ ದರ್ಜೆಯ ನೌಕರೆಯಾಗಿ ನೇಮಕಾತಿ ನೀಡಲಾಗಿದೆ. ಜೊತೆಗೆ ಸಂಗೀತಾ ಅವರು ಹೊಸದುರ್ಗ ಮುನ್ಸಿಫ್ ನ್ಯಾಯಾಲಯದಲ್ಲಿ ಕೊನೆಯ ದರ್ಜೆಯ ನೌಕರೆಯಾಗಿ ನೇಮಿಸಲಾಗಿದೆ. ಎರಡೂ ನ್ಯಾಯಾಲಯಗಳು ಒಂದೇ ಕಾಂಪೌಂಡ್‍ನಲ್ಲಿವೆ. ಅವರಿಬ್ಬರಿಗೂ ಶುಕ್ರವಾರ ನೇಮಕಾತಿ ಆದೇಶ ಲಭಿಸಿತ್ತು. ಅವರು ಕಲ್ಲಂಚಿರ ಎ.ಎಲ್.ಪಿ. ಶಾಲೆ, ಪ್ಲಾಚಿಕ್ಕರ ಎ.ಯು.ಪಿ. ಶಾಲೆ ಮತ್ತು ವರಕಾಡ್ ವಲ್ಲಿಯೋಡನ್ ಕೆಲುನೈರ್ ಸ್ಮಾರಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಣ ಪಡೆದವರು.
ಶಾಲೆಯಲ್ಲಿ ಓದುವಾಗ ಅವರು ಒಂದೇ ತರಗತಿಯಲ್ಲಿದ್ದರು. ಪ್ಲಸ್ ಟು ನಂತರ, ಇಬ್ಬರೂ ಅನಿಮೇಷನ್ ಅಧ್ಯಯನ ಮಾಡಿದರು. ನಂತರ ಅವರು ಪಿಎಸ್‍ಸಿ ಕೋಚಿಂಗ್‍ಗೆ ಜೊತೆಗೇ ಸೇರಿಕೊಂಡರು. ಕೊನೆಗೆ, ಅವರು ಒಂದೇ ಸ್ಥಳದಲ್ಲಿ ಒಟ್ಟಿಗೆ ಕೆಲಸಕ್ಕೆ ನೇಮಕಾತಿ ಆದೇಶ ಲಭಿಸಿರುವುದೂ ವಿಶಿಷ್ಟವೆಂದು ಗುರುತಿಸಲ್ಪಟ್ಟಿದೆ. ಕಲ್ಲಂಚಿರ ಕೆಐಎ ಎಲ್‍ಪಿ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿರುವ ತಾಯಿ ಸುನಿ ಜಾರ್ಜ್ ಪ್ರತಿಕ್ರಯಿಸಿ ಇಬ್ಬರೂ ತಮ್ಮ ಪಿಎಸ್‍ಸಿ ತರಬೇತಿಯನ್ನು ಮುಂದುವರಿಸಲು ಬಯಸುತ್ತಿದ್ದಾರೆ ಎಂದು ಹೇಳಿದರು. ಅವರು ಆನ್‍ಲೈನ್‍ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸುವರು ಎಂದು ತಿಳಿಸಿದ್ದಾರೆ. ಅವರ ತಂದೆ ಜೋಸೆಫ್ ಕೆಎಸ್‍ಇಬಿಯ ನಿವೃತ್ತ ಹಿರಿಯ ಸೂಪರಿಂಟೆಂಡೆಂಟ್. ಈ ಅವಳಿ ಸೋದರಿಯರ ಅಕ್ಕ ಕವಿತಾ ಜೋಸೆಫ್ ವಿವಾಹಿತರಾಗಿ ಬೆಂಗಳೂರಿನಲ್ಲಿ ನೆಲಸಿದ್ದಾರೆ.




.jpg)
