ಬೀಜಿಂಗ್: ತಂಬಾಕು ಸೇವನೆಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಭಾರತದಲ್ಲಿ ಸಿಗರೇಟ್, ಗುಟ್ಕಾ ಮೇಲೆ ಸೆಸ್ ಹೇರಿದ ಸುದ್ದಿ ಇತ್ತೀಚೆಗೆ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಚೀನಾದಲ್ಲಿ ಕಾಂಡೋಮ್ ಮತ್ತು ಗರ್ಭನಿರೋಧಕ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳವಾಗುತ್ತಿರುವುದು ಈಗ ಸುದ್ದಿಯಲ್ಲಿದೆ.
ಸತತ 30 ವರ್ಷಗಳ ನಂತರ ಚೀನಾ ಸರ್ಕಾರದ ಈ ನಿರ್ಧಾರದ ಹಿಂದಿನ ಕಾರಣ ಮಾತ್ರ ಅಚ್ಚರಿ ಮೂಡಿಸುವಂತಿದೆ.
ಈ ಹಿಂದೆ ಗರ್ಭನಿರೋಧಕ ಉತ್ಪನ್ನಗಳ ಮೇಲೆ ಚೀನಾ ಸರ್ಕಾರ ವಿನಾಯಿತಿ ನೀಡಿತ್ತು. ಆದರೆ ಈಗ ಹೊಸ ನೀತಿಯನ್ನು ಜಾರಿಗೆ ತಂದಿದ್ದು, ಕಾಂಡೋಮ್ ಮತ್ತು ಗರ್ಭನಿರೋಧಕ ಉತ್ಪನ್ನಗಳ ಮೇಲೆ ಬರೋಬ್ಬರಿ ಶೇ 13ರಷ್ಟು ತೆರಿಗೆ ಹೇರಿದೆ.
ಈ ಹೊಸ ನೀತಿ 2026ರ ಜನವರಿ 1 ರಿಂದ ಜಾರಿಗೆ ಬರಲಿದೆ.
ಚೀನಾದಲ್ಲಿ ಕುಸಿದ ಜನನ ಪ್ರಮಾಣ
ಜನಸಂಖ್ಯೆಯಿಂದಲೇ ಜಗತ್ತು ತಿರುಗಿ ನೋಡುವಂತೆ ಮಾಡಿದ್ದ ಚೀನಾದಲ್ಲಿ 2024ರಲ್ಲಿ ಜನನ ಪ್ರಮಾಣ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ. ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋದ ಪ್ರಕಾರ, ಜನಸಂಖ್ಯೆ ಪ್ರಮಾಣ 140 ಕೋಟಿಗೆ ಇಳಿದಿದೆ.
ಚೀನಾ: 2025ರ ವೇಳೆಗೆ ಜನಸಂಖ್ಯೆ ಬೆಳವಣಿಗೆ ದರ ಕುಸಿತಚೀನಾ ಜನಸಂಖ್ಯೆ ಸತತ ಮೂರನೇ ವರ್ಷವೂ ಕುಸಿತ; ಆರ್ಥಿಕತೆಗೆ ಸವಾಲು
ಮಕ್ಕಳನ್ನು ಪಡೆಯಲು ಯುವಜನತೆ ಹಿಂದೇಟು
ಚೀನಾದಲ್ಲಿ ದಂಪತಿ ಮಕ್ಕಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಕಾರಣ ದುಬಾರಿ ವೆಚ್ಚ.
2024ರಲ್ಲಿ ಬೀಜಿಂಗ್‌ನ ಯುವಾ ಪಾಪ್ಯುಲೇಶನ್ ರಿಸರ್ಚ್ ಇನ್ಸ್ಟಿಟ್ಯೂಟ್ ವರದಿ ಪ್ರಕಾರ, ಮಕ್ಕಳನ್ನು ಬೆಳೆಸಲು ಚೀನಾ ಅತ್ಯಂತ ದುಬಾರಿ ದೇಶಗಳಲ್ಲಿ ಒಂದಾಗಿದೆ.
ವರದಿ ಪ್ರಕಾರ ಚೀನಾದಲ್ಲಿ 18 ವರ್ಷಗಳವರೆಗೆ ಮಕ್ಕಳನ್ನು ಸಾಕಲು ತಗಲುವ ವೆಚ್ಚ 538,000 ಯುವಾನ್ (ಸುಮಾರು ₹68 ಲಕ್ಷ). ಇದಲ್ಲದೆ ಆರ್ಥಿಕತೆ ಬೆಳವಣಿಗೆ ಕುಸಿತ ಮತ್ತು ನಿರುದ್ಯೋಗದ ಭಯದಿಂದಾಗಿ ನವದಂಪತಿ ಮಕ್ಕಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತಗ್ಗಿದ ಚೀನಾ ಜನಸಂಖ್ಯೆಚೀನಾ ಜನಸಂಖ್ಯೆ ವರ್ಷದಲ್ಲಿ ಕೇವಲ 4.80 ಲಕ್ಷ ಹೆಚ್ಚಳ!
ಜನಸಂಖ್ಯೆ ಹೆಚ್ಚಿಸಲು ಸರ್ಕಾರದ ತಂತ್ರ
1993ರಿಂದ 2015ರವರೆಗೆ ಚೀನಾದಲ್ಲಿ ಜನಸಂಖ್ಯೆ ನಿಯಂತ್ರಿಸಲು ಒಂದು ಕುಟುಂಬ ಒಂದು ಮಗು ನೀತಿಯನ್ನು ಜಾರಿಗೊಳಿಸಲಾಗಿತ್ತು. ಇದರಿಂದಾಗಿ ದೇಶದಲ್ಲಿ ನವಜಾತ ಶಿಶುಗಳ ಜನನ ಕುಸಿತವಾಗಿತ್ತು. ಹೀಗಾಗಿ ಜನಸಂಖ್ಯೆ ಹೆಚ್ಚಳಕ್ಕೆ ಸ್ಥಳೀಯ ಆಡಳಿತಗಳು ಮಗು ಹುಟ್ಟಿದ ಬಳಿಕ ಕುಟುಂಬಕ್ಕೆ ನಗದು ಬಹುಮಾನ, ಪೋಷಕತ್ವ ರಜೆಗಳ ಹೆಚ್ಚಳ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿತ್ತು. ಅಲ್ಲದೆ ವೈದ್ಯಕೀಯ ಸಮಸ್ಯೆಗಳಿಲ್ಲದಿದ್ದರೆ ಗರ್ಭಪಾತ ಮಾಡಿಸದಂತೆ ಸೂಚನೆ ನೀಡಿತ್ತು. ಹೀಗಿದ್ದೂ ನಾಗರಿಕರು ಮಕ್ಕಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದರು.
ಈಗ ಹೊಸ ತಂತ್ರ ರೂಪಿಸಿರುವ ಸರ್ಕಾರ ಕಾಂಡೋಮ್ ಮತ್ತು ಗರ್ಭನಿರೋಧಕ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿ ಜನರ ಜೇಬಿಗೆ ಹೊರೆಯಾಗುವಂತೆ ಮಾಡಿದೆ.
ಜನಸಂಖ್ಯೆ: 2027ರ ವೇಳೆಗೆ ಚೀನಾ ಮೀರಿಸಲಿದೆ ಭಾರತ!
ಹೆಚ್ಚಿದ ಸೋಂಕಿನ ಭಯ
ಕಾಂಡೋಮ್‌ಗಳಿಗೆ ತೆರಿಗೆ ಹೆಚ್ಚಳ ಮಾಡುವ ವಿಚಾರ ಹೊರಬೀಳುತ್ತಲೇ ದೇಶದಾದ್ಯಂತ ಚರ್ಚೆ ಆರಂಭವಾಗಿದೆ. ಇದಕ್ಕೆ ಕಾರಣ ಎಚ್‌ಐವಿಯಂತಹ ಸೋಂಕು ಹೆಚ್ಚಳವಾಗುವ ಆತಂಕ.
ಜಗತ್ತಿನಾದ್ಯಂತ ಎಚ್‌ಐವಿ ಸೊಂಕಿನ ಪ್ರಕರಣ ಕಡಿಮೆಯಾಗುತ್ತಿದ್ದರೆ ಚೀನಾದಲ್ಲಿ ಮಾತ್ರ ಹೆಚ್ಚಳವಾಗುತ್ತಲೇ ಇದೆ. ಇದರ ನಡುವೆ ಕಾಂಡೋಮ್ ಮತ್ತು ಗರ್ಭ ನಿರೋಧಕ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದರೆ ಸುರಕ್ಷಿತ ಲೈಂಗಿಕ ಕ್ರಿಯೆ ಸಾಧ್ಯವಾಗದೆ ಸೋಂಕು ಕಾಣಿಸಿಕೊಳ್ಳಬಹುದು ಎನ್ನುವುದು ಮತ್ತು ಯೋಜಿತವಲ್ಲದ ಗರ್ಭಧಾರಣೆ ಸಂಖ್ಯೆ ಹೆಚ್ಚಳವಾಗಬಹುದು ಎನ್ನುವ ವಿಚಾರ ಚೀನಾದ ಮೈಕ್ರೋಬ್ಲಾಗಿಂಗ್ ಸೈಟ್‌ಗಳಲ್ಲಿ ಚರ್ಚೆಯಾಗುತ್ತಿರುವುದಾಗಿ 'ದಿ ಪ್ರಿಂಟ್' ವರದಿ ತಿಳಿಸಿದೆ.
ದೇಶದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, 2002 ಮತ್ತು 2021 ರ ನಡುವೆ, ವರದಿಯಾದ ಎಚ್‌ಐವಿ ಮತ್ತು ಏಡ್ಸ್ ಪ್ರಕರಣಗಳ ಪ್ರಮಾಣವು ಶೇ 0.37 ರಿಂದ ಶೇ8.41ಕ್ಕೆ ಏರಿಕೆಯಾಗಿದೆ.
ದಂಪತಿಗಳಿಗೆ ಹೆಚ್ಚಿನ ಮಕ್ಕಳು ಹೆರಲು ಚೀನಾ ಪ್ರೋತ್ಸಾಹವಿಶ್ಲೇಷಣೆ | ಚೀನಾ; ಮಕ್ಕಳನ್ನು ಹೆರಲು ಇಲ್ಲ ನಿರ್ಬಂಧ'ಒಂದೇ ಮಗು' ನೀತಿ ಕೈಬಿಟ್ಟ ಚೀನಾಚೀನಾ: ಮೂರು ಮಕ್ಕಳು ಬೇಡ ಎನ್ನುತ್ತಿದೆ ಯುವ ಪೀಳಿಗೆ.




