ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ತಪಾಸಣೆ ನಡೆಸುತ್ತಿರುವ ಆ್ಯಂಟಿ ಡೀಫೇಸ್‍ಮೆಂಟ್ ಸ್ಕ್ವೇಡ್ ನಡೆಸಿದ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ 176 ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಿದೆ.
ಮಂಜೇಶ್ವರಂ ತಾಲೂಕಿನ ಜಿಲ್ಲಾಪಂಚಾಯಿತಿ ವರ್ಕಾಡಿ ವಿಭಾಗದ ನೂರ್‍ಗೋಲಿ ಮತ್ತು ಮಂಜೇಶ್ವರ ಗ್ರಾಮಪಂಚಾಯಿತಿಯ ಬಂಗ್ರ ಪ್ರದೇಶದಿಂದ ಒಂದು ಬ್ಯಾನರ್ ತೆರವುಗೊಳಿಸಲಾಗಿದೆ.
ಕಾಸರಗೋಡು ತಾಲ್ಲೂಕಿನಲ್ಲಿ 35 ಪೆÇೀಸ್ಟರ್‍ಗಳು, ವಿವಿಧ ರಾಜಕೀಯ ಪಕ್ಷಗಳ ಐದು ಧ್ವಜಗಳು ಮತ್ತು ಒಂದು ಫ್ಲೆಕ್ಸ್, ಹೊಸದುರ್ಗ ತಾಲ್ಲೂಕಿನಲ್ಲಿ 112 ಪೆÇೀಸ್ಟರ್‍ಗಳು, 15 ರಾಜಕೀಯ ಪಕ್ಷಗಳ ಧ್ವಜಗಳು ಮತ್ತು ಆರು ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ. ಮೂರು ತಾಲ್ಲೂಕುಗಳ ಉಸ್ತುವಾರಿ ವಹಿಸಿರುವ ಆ್ಯಂಟಿ ಡೀಫೇಸ್‍ಮೆಂಟ್ ಸ್ಕ್ವೇಡ್‍ನ ಭೂದಾಖಲೆ ವಿಭಾಗ ತಹಶೀಲ್ದಾರ್‍ಗಳಾದ ಟಿ.ಪಿ. ಸಮೀರ್, ಪಿ.ವಿ. ಶೆರಿಲ್ ಬಾಬು ಮತ್ತು ಸೂಟ್ ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ವಿ. ಶ್ರೀಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

