ನವದೆಹಲಿ: ಪ್ರಧಾನ ಮಂತ್ರಿ ಅವರ ಕಚೇರಿ ಇರುವ ಹೊಸ ಸಂಕೀರ್ಣವನ್ನು 'ಸೇವಾ ತೀರ್ಥ' ಎಂದು ಕರೆಯಲಾಗುವುದು ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ನಿರ್ಮಾಣದ ಅಂತಿಮ ಹಂತದಲ್ಲಿರುವ ಈ ನೂತನ ಸಂಕೀರ್ಣಕ್ಕೆ ಈ ಹಿಂದೆ ಸೆಂಟ್ರಲ್ ವಿಸ್ತಾ ಮರು ಅಭಿವೃದ್ಧಿ ಯೋಜನೆಯ ಅಡಿಯಲ್ಲಿ 'ಎಕ್ಸ್‌ಕ್ಯೂಟಿವ್ ಎಂಕ್ಲೇವ್' ಎಂದು ಕರೆಯಲಾಗುತ್ತಿತ್ತು.
'ಎಕ್ಸ್‌ಕ್ಯೂಟಿವ್ ಎಂಕ್ಲೇವ್' ಪ್ರಧಾನ ಮಂತ್ರಿ ಕಚೇರಿ ಅಲ್ಲದೆ, ಸಂಪುಟ ಕಾರ್ಯಾಲಯ, ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯ ಹಾಗೂ ಇಂಡಿಯಾ ಹೌಸ್ ಅನ್ನು ಒಳಗೊಂಡಿರಲಿದೆ. ಇದು ಭೇಟಿ ನೀಡುವ ಗಣ್ಯರು ಉನ್ನತ ಮಟ್ಟದ ಮಾತುಕತೆ ನಡೆಸುವ ಸ್ಥಳವಾಗಲಿದೆ.
ಸೇವಾ ತೀರ್ಥವು ಸೇವಾ ಮನೋಭಾವನ್ನು ಪ್ರತಿಬಂಬಿಸುವ ಹಾಗೂ ರಾಷ್ಟ್ರೀಯ ಆದ್ಯತೆಗಳು ರೂಪುಗೊಳ್ಳುವ ಕಾರ್ಯ ಸ್ಥಳವಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಪಾಲರ ನಿವಾಸಗಳಾದ ರಾಜ ಭವನಗಳಿಗೆ ಕೂಡ 'ಲೋಕಭವನ' ಎಂದು ಮರು ನಾಮಕರಣ ಮಾಡಲಾಗುತ್ತಿದೆ.




