ಕಾಸರಗೋಡು: ಮೀನುಗಾರಿಕೆ ಮಧ್ಯೆ ದೋಣಿಯಿಂದ ಬಿದ್ದು, ಮೀನು ಕಾರ್ಮಿಕ ನಾಪತ್ತೆಯಾಗಿದ್ದಾರೆ. ಕೊಳತ್ತೂರು ತೊಟ್ಟಿ ನಿವಾಸಿ ರಾಮಕೃಷ್ಣನ್(48)ನಾಪತ್ತೆಯಾದವರು. ಚೆಂಬರಿಕ ಸಮುದ್ರದಲ್ಲಿ ಸುಮಾರು ಏಳು ಕಿ.ಮೀ ದೂರದಲ್ಲಿಮೀನು ಹಿಡಿದು ವಾಪಸಾಗುವ ಮಧ್ಯೆ ರಾಮಕೃಷ್ಣನ್ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದರು. ತಕ್ಷಣ ಜತೆಗಿದ್ದವರು ಕರಾವಳಿ ಪೊಲೀಸ್ ಠಾಣೆಗೆ ನೀಡಿದ ಮಾಹಿತಿಯನ್ವಯ ಹುಡುಕಾಟ ಮುಂದುವರಿಸಲಾಗಿದೆ. ಕಾಸರಗೋಡಿನ ಕರಾವಳಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




