ಆ ಹಿಂದೂ ನಾಯಕರ ಹೆಸರು ಗೋವಿಂದ ಚಂದ್ರ ಪ್ರಾಮಾಣಿಕ್. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಖಾಲಿ ಸ್ಥಾನವನ್ನು ತಾವು ತುಂಬುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಜೀವಕ್ಕೆ ಎಷ್ಟು ಅಪಾಯವಿರಬಹುದು ಅಂತ ನೀವೇ ಊಹಿಸಿಕೊಳ್ಳಿ.
ಬಾಂಗ್ಲಾದೇಶದ ರಾಜಕೀಯವು ಗೊಂದಲಮಯವಾಗಿದೆ. ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ, ಉಗ್ರಗಾಮಿಗಳು ಬೀದಿಗಿಳಿದು, ಹಿಂದೂಗಳನ್ನು ಗುರಿಯಾಗಿಸಿಕೊಂಡು, ಉಸ್ಮಾನ್ ಹಾದಿ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳನ್ನು ಕೊಂದಿದ್ದಾರೆ. ಇದರ ಮಧ್ಯ, ಒಬ್ಬ ಧೈರ್ಯಶಾಲಿ ಹಿಂದೂ ನಾಯಕ ತನ್ನ ಜೀವವನ್ನು ಪಣಕ್ಕಿಟ್ಟು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಈ ಹಿಂದೂ ಶೇಖ್ ಹಸೀನಾ ಅವರ ಖಾಲಿ ಸ್ಥಾನ ತುಂಬಿ ಕೇಸರಿ ಧ್ವಜ ಹಾರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಉಗ್ರಗಾಮಿಗಳ ಭಯೋತ್ಪಾದನೆಗೆ ಹೆದರದೆ ಬದಲಾಗಿ ಪ್ರತಿದಾಳಿ ನಡೆಸಿದ ಗೋವಿಂದ್ ಚಂದ್ರ ಪ್ರಾಮಾಣಿಕ್ ಅವರ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು..
ಹೌದು.. ಗೋವಿಂದ್ ಚಂದ್ರ ಪ್ರಾಮಾಣಿಕ್ ಬಾಂಗ್ಲಾದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅವರು ಶೇಖ್ ಹಸೀನಾ ಅವರ ಸ್ಥಾನವಾದ ಗೋಪಾಲ್‌ಗಂಜ್‌ನಿಂದ ಸ್ಪರ್ಧಿಸಲಿದ್ದಾರೆ. ಡಿಸೆಂಬರ್ 28 ರಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಮೂಲಭೂತವಾದಿಗಳು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಗುರಿಯಿಟ್ಟು ಹತ್ಯೆಗಳನ್ನು ನಡೆಸುತ್ತಿರುವ ಸಮಯದಲ್ಲಿ ನಿಜವಾಗಿಯೂ ಇವರ ಧೈರ್ಯ ಮೆಚ್ಚುವಂತಹದ್ದು.
ಗೋವಿಂದ ಚಂದ್ರ ಪ್ರಾಮಾಣಿಕ್ ವೃತ್ತಿಯಲ್ಲಿ ವಕೀಲರು ಮತ್ತು ಬಾಂಗ್ಲಾದೇಶದ ಪ್ರಜೆ. "ಜಾತೀಯ ಹಿಂದೂ ಮಹಾಜೋತ್" ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಇದೀಗ ಬಾಂಗ್ಲಾದೇಶ ರಾಜಕೀಯದಲ್ಲಿ ಅಲೆಗಳನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ. ಗೋವಿಂದ್ ಅವರು ಡಿಸೆಂಬರ್ 28 ರಂದು ತಮ್ಮ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಈ ಚುನಾವಣೆಯಲ್ಲಿ ಯಾವುದೇ ಪಕ್ಷದ ಬೆಂಬಲವನ್ನು ಪಡೆಯಲು ಅವರು ನಿರಾಕರಿಸಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಮೂಲಭೂತವಾದಿ ಸಿದ್ಧಾಂತದ ಪ್ರಮುಖ ವ್ಯಕ್ತಿಗಳೆಂದರೆ ಜಮಾತ್-ಎ-ಇಸ್ಲಾಮಿಯ ಎಂ.ಎಂ. ರೆಝೌಲ್ ಕರೀಮ್, ಬಿ.ಎನ್.ಪಿ.ಯ ಎಸ್.ಎಂ. ಜಿಲಾನಿ, ಇಸ್ಲಾಮಿಕ್ ಮೂವ್ಮೆಂಟ್ನ ಮರುಫ್ ಶೇಖ್ ಮತ್ತು ಖಿಲಾಫತ್ ಮಜ್ಲಿಸ್ನ ಓಲಿ ಅಹ್ಮದ್, ಇವರು ಅಧಿಕಾರವನ್ನು ಇಸ್ಲಾಮೀಕರಣಗೊಳಿಸುವ ಕನಸು ಕಾಣುತ್ತಾರೆ. ಅವರಲ್ಲಿ ಗೋವಿಂದ್ ಏಕೈಕ ಹಿಂದೂ ಅಭ್ಯರ್ಥಿ. ಮೊದಲ ಬಾರಿಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಹಿಂದೂ ಧ್ವಜ ಹಾರಿಸಲು ಸಿದ್ಧವಾಗಿರುವ ಅವರಿಗೆ ಸಾರ್ವಜನಿಕ ಬೆಂಬಲ ಸಿಗುತ್ತದೆಯೇ.. ಗೆಲುವು ಲಭಿಸುತ್ತದೆಯೇ..? ಎಂದು ನೋಡಬೇಕಿದೆ..

