HEALTH TIPS

ಭಾರತೀಯರಿಂದ ಅಮೆರಿಕಕ್ಕೆ ಭಾರಿ ಅನುಕೂಲ: ಟ್ರಂಪ್ 'ಆ' ನಿರ್ಧಾರಕ್ಕೆ ಮಸ್ಕ್ ಅಸಹಮತ

ನ್ಯೂಯಾರ್ಕ್‌: 'ಪ್ರತಿಭಾವಂತ ಭಾರತೀಯರಿಂದ ಅಮೆರಿಕವು ದೊಡ್ಡ ಮಟ್ಟದ ಲಾಭ ಪಡೆದುಕೊಂಡಿದೆ. ಎಚ್‌1ಬಿ ವೀಸಾ ಕಾರ್ಯಕ್ರಮಕ್ಕೆ ನಾನು ಬೆಂಬಲ ವ್ಯಕ್ತಪಡಿಸುತ್ತೇನೆ. ಈಗ ಅದನ್ನು ಸ್ಥಗಿತಗೊಳಿಸಿರುವುದು ಅಮೆರಿಕಕ್ಕೆ ನೈಜವಾಗಿ ಹಾನಿ ಉಂಟುಮಾಡಲಿದೆ ಎಂಬುದು ಅವರಿಗೆ ಅರ್ಥವಾಗುತ್ತಿಲ್ಲ' ಎಂದು ಸ್ಪೇಸ್‌ಎಕ್ಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.

ಜೆರೋಧಾ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್‌ ಕಾಮತ್‌ ಅವರು ನಡೆಸಿಕೊಡುವ 'ಪೀಪಲ್‌ ಬೈ ಡಬ್ಲ್ಯುಟಿಎಫ್‌' ಪಾಡ್‌ಕಾಸ್ಟ್‌ ಸರಣಿಯಲ್ಲಿ ಪಾಲ್ಗೊಂಡು ಈ ಮಾತು ಹೇಳಿದ್ದಾರೆ.

'ಹೌದು. ಭಾರತದ ಪ್ರತಿಭಾವಂತರಿಂದ ಅಮೆರಿಕವು ದೊಡ್ಡ ಮಟ್ಟದ ಲಾಭ ಪಡೆದುಕೊಂಡಿತು. ವೀಸಾವು ಒಂದಿಷ್ಟು ದುರಪಯೋಗ ಆಗುತ್ತಿರಬಾರದು, ಆದರೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು' ಎಂದು ಪ್ರತಿಪಾದಿಸಿದ್ದಾರೆ.

ಒಂದು ಹಂತದವರೆಗೂ ವಲಸೆ ವಿರೋಧಿ ನೀತಿಯಾಗಿ ಅಮೆರಿಕ ಬದಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವಿಚಾರಕ್ಕೆ ಹಲವು ಅಭಿಪ್ರಾಯಗಳಿರುತ್ತವೆ. ಯಾವುದೇ ಒಮ್ಮತವಿಲ್ಲ. ಆದರೂ ಬೈಡನ್‌ ಸರ್ಕಾರದ ಅವಧಿಯಲ್ಲಿ ಎಲ್ಲರಿಗೂ ಮುಕ್ತವಾಗಿತ್ತು. ಗಡಿಯಲ್ಲೂ ಯಾವುದೇ ನಿಯಂತ್ರಣವಿರಲಿಲ್ಲ. ಗಡಿ ನಿಯಂತ್ರಿಸದೇ, ದೇಶವೆಂದು ಕರೆಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

'ಬೈಡನ್‌ ಅವಧಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ವಲಸಿಗರು ದೇಶದೊಳಗೆ ಪ್ರವೇಶಿಸಿ, ಋಣಾತ್ಮಕ ಸಮಸ್ಯೆ ತಂದಿಟ್ಟರು. ಅಕ್ರಮವಾಗಿ ದೇಶದೊಳಗೆ ಪ್ರವೇಶಿಸಿದವರಿಗೂ ದೊಡ್ಡ ಪ್ರಮಾಣದಲ್ಲಿ ಸಬ್ಸಿಡಿ ನೀಡಿದರೆ, ನಷ್ಟ ಹೆಚ್ಚು. ಅದಕ್ಕೆ ಕಡಿವಾಣ ಹಾಕುವುದು ಅಗತ್ಯ' ಎಂದು ವಿವರಿಸಿದ್ದಾರೆ.

ಹಣದ ಹಿಂದೆ ಬೀಳದಿರಿ:

'ಹಣ ಗಳಿಸಬೇಕೆಂದವರು ಹಣದ ಹಿಂದೆ ಬೀಳಬಾರದು. ನೀವು ಏನು ಪಡೆಯುತ್ತಿರೋ, ಅದಕ್ಕಿಂತ ಹೆಚ್ಚಿನದನ್ನು ನೀಡಿ. ಸಮಾಜಕ್ಕೆ ನೀಡುವುದನ್ನು ಮುಂದುವರಿಸಿ. ಮೌಲ್ಯಯುತವಾದ ಉಪಯುಕ್ತ ವಸ್ತು ಹಾಗೂ ಸೇವೆಗಳನ್ನು ನೀಡಿದರೆ, ಹಣ ನೈಸರ್ಗಿಕವಾಗಿ ನಿಮ್ಮ ಹಿಂದೆಯೇ ಬರುತ್ತದೆ' ಎಂದು ಯುವ ಉದ್ಯಮಿಗಳಿಗೆ ಸಲಹೆ ನೀಡಿದ್ದಾರೆ.

 ನಿಖಿಲ್‌ ಕಾಮತ್‌-ಎಲಾನ್‌ ಮಸ್ಕ್‌

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries