ಕುಂಬಳೆ: ಸಾರ್ವಜನಿಕ ಪ್ರದೇಶದಲ್ಲಿ ಮಾರಕ ಎಂಡಿಎಂಎ ಸೇದುತ್ತಿದ್ದ ಇಬ್ಬರು ಯುವಕರನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುತ್ತಿಗೆ ಕಟ್ಟತ್ತಡ್ಕ ನಿವಾಸಿ ಶರೀಫ್ ಹಾಗೂ ಪುತ್ತಿಗೆ ಪೂಕಟ್ಟೆ ನಿವಾಸಿ ಹ್ಯಾರಿಸ್ ಎಂ.ಎ ಬಂಧಿತರು.
ಇನ್ನೊಂದು ಪ್ರಕರಣದಲ್ಲಿ ಸೀತಾಂಗೋಳಿಯಲ್ಲಿ ಕುಂಬಳೆ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 145ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ವಶಪಡಿಸಿಕೊಂಡು, ಎಡನಾಡು ಮುಕಾರಿಕಂಡ ನಿವಾಸಿ ಅಬ್ದುಲ್ ಅಸೀಸ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.




