ಕಾಸರಗೋಡು: ವರ್ಕಾಡಿ ದೇವಂದಪಡ್ಪು ಶ್ರೀ ಮಹಾವಿಷ್ಣು ದೇವಸ್ಥಾನ ವಠಾರದಲ್ಲಿ ಶ್ರೀ ಅಯ್ಯಪ್ಪ ದೀಪೆÇೀತ್ಸವ ನಡೆಸುವ ನಿಟ್ಟಿನಲ್ಲಿ ಸಮಿತಿ ರಚನಾ ಸಭೆ ದೇವಾಲಯದಲ್ಲಿಜರುಗಿತು. ದೇವಂದಪಡ್ಪು ಶ್ರೀ ಅಯ್ಯಪ್ಪ ಭಕ್ತವೃಂದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿರುವುದು. ನೂತನ ಸಮಿತಿ ಅಧ್ಯಕ್ಷರಾಗಿ ಐತ್ತಪ್ಪ ಶೆಟ್ಟಿ ದೇವಂದ ಪಡ್ಪು ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಮೋಹನದಾಸ್ ಭಂಡಾರಿ ನೆತ್ತಿಲ ಬಾಳಿಕೆ, ಸಂಜೀವ ಶೆಟ್ಟಿ ಮಾಡ, ಮೋಹನ್‍ದಾಸ್ ಶೆಟ್ಟಿ ನೆತ್ತಿಲ ಬಾಳಿಕೆ, ಧನಂಜಯ ಪೂಜಾರಿ ನೆತ್ತಿಲಪದವು, ಜಗದೀಶ್ ಸುಳ್ಯ, ಉಪಾಧ್ಯಕ್ಷರಾಗಿ ಮಾಧವ ಪೂಜಾರಿ ಕುದುಕೋರಿ, ಪ್ರೇಮಾನಂದ ರೈ ನೆತ್ತಿಲ ಕೋಡಿ, ಕೃಷ್ಣಸ್ವಾಮಿ ಬೊಲ್ಕುಡ್ಡೆ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ ನೆತ್ತಿಲ ಕೆಳಗಿನಮನೆ, ಕಾರ್ಯದರ್ಶಿಗಳಾಗಿಗಿ ಜಯಪ್ರಕಾಶ್ ಆಡ್ಯಂತಾಯ ಕಾಪು, ಶೇಖರ್ ಮಾರ್ಲ ಸಾಂತ್ಯ ಗಡದ ಗುತ್ತು, ಕಿರಣ್ ಸ್ವಾಮಿ, ಕೋಶಾಧಿಕಾರಿಯಾಗಿ ಪ್ರಮೋದ್ ಕುಮಾರ್ ಗೇರುಕಟ್ಟೆ, ಪ್ರಧಾನ ಸಂಚಾಲಕರಾಗಿ ರವಿಮುಡಿಮಾರು ಅವರನ್ನು ಆಯ್ಕೆ ಮಾಡಲಾಯಿತು. ಈಸಂದರ್ಭ ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.





