ಪತ್ತನಂತಿಟ್ಟ: ಅತ್ತೆ ಮತ್ತು ಸೊಸೆ ಸ್ಪರ್ಧಿಸಿದ್ದ ಪಳ್ಳಿಕ್ಕಲ್ ಪಂಚಾಯತ್‍ನ ಹನ್ನೊಂದನೇ ವಾರ್ಡ್‍ನಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರೂ ಪರಾಭವಗೊಂಡಿರುವರು.
ಯುಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೊಸೆ ಜಾಸ್ಮಿನ್ ಎಬಿ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅತ್ತೆ ಕುಂಜುಮೋಲ್ ಕೊಚುಪಪ್ಪಿ ಪರಾಭವಗೊಂಡರು. ಎಲ್‍ಡಿಎಫ್‍ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರಭಿ ಸುನಿಲ್ ವಾರ್ಡ್ ಅನ್ನು ಗೆದ್ದರು.
ಪಳ್ಳಿಕ್ಕಲ್ ಪಂಚಾಯತ್‍ನ ಹನ್ನೊಂದನೇ ವಾರ್ಡ್ ಗಮನಾರ್ಹವಾಗಿತ್ತು. ಅತ್ತೆ ಮತ್ತು ಸೊಸೆ ಮುಖಾಮುಖಿಯಾಗಿ ಸ್ಪರ್ಧಿಸುತ್ತಿರುವುಉದ ಭಾರೀ ಕುತೂಹಲ ಮೂಡಿಸಿತ್ತು. ಯುಡಿಎಫ್ ಅಭ್ಯರ್ಥಿ ಜಾಸ್ಮಿನ್ 167 ಮತಗಳನ್ನು ಪಡೆದರೆ, ಕುಂಜುಮೋಲ್ ಕೇವಲ 17 ಮತಗಳನ್ನು ಮಾತ್ರ ಪಡೆದರು.
ತ್ರಿಕೋನ ಸ್ಪರ್ಧೆ ಇದ್ದ ವಾರ್ಡ್‍ನಲ್ಲಿ ಬಿಜೆಪಿ ಅಭ್ಯರ್ಥಿ ನಿರುಪಮಾ 168 ಮತಗಳನ್ನು ಗಳಿಸಿದರು. ಅವರ ಸೊಸೆ ಯುಡಿಎಫ್ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತ ಯಾಚಿಸಿದರೆ, ಕುಂಜುಮೋಲ್ ಏಕಾಂಗಿಯಾಗಿ ಪ್ರಚಾರ ಮಾಡಿದ್ದರು.
ಕುಂಜುಮೋಲ್ ಈ ಹಿಂದೆ ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಸ್ಥಾನಗಳನ್ನು ಗೆದ್ದಿದ್ದರು. ಆದಾಗ್ಯೂ, ಕುಂಜುಮೋಲ್ ಅವರ ಸೊಸೆ ಮತ್ತು ಯುಡಿಎಫ್ ಅಭ್ಯರ್ಥಿ ಜಾಸ್ಮಿನ್ ಎಬಿ ಇದು ಪ್ರಜಾಪ್ರಭುತ್ವವಾಗಿರುವುದರಿಂದ ಯಾರೂ ಸ್ಪರ್ಧಿಸಬಹುದು ಎಂದು ಪ್ರತಿಕ್ರಿಯಿಸಿರುವರು.

