ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿ 22 ನೇ ವಾರ್ಡ್ ಮಾಟಂಗುಳಿಯಲ್ಲಿ ಎಲ್‍ಡಿಎಫ್ ಸ್ವತಂತ್ರ ಅಭ್ಯರ್ಥಿಯನ್ನು ಜನರು ಬಹುಮತದಿಂದ ಗೆಲ್ಲಿಸುವರು ಎಂದು ವಾರ್ಡ್ ಎಲ್‍ಡಿಎಫ್ ಚುನಾವಣಾ ಸಮಿತಿಯ ಪದಾಧಿಕಾರಿಗಳು ಕುಂಬಳೆಯಲ್ಲಿ ಮಂಗಳವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
20 ವರ್ಷಗಳ ಹಿಂದೆ ಇಲ್ಲಿ ಆಯ್ಕೆಯಾಗಿದ್ದ ಎಡ ಪಂಚಾಯತಿ ಸದಸ್ಯರು ತಂದ ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿ ಈ ವರೆಗೆ ಈ ವಾರ್ಡ್‍ನಲ್ಲಿ ಬೇರೇನೂ ಅಭಿವೃದ್ಧಿ ಚಟುವಟಿಕೆ ನಡೆದಿಲ್ಲ ಎಂದು ಪಕ್ಷದ ಪ್ರತಿನಿಧಿಗಳು ತಿಳಿಸಿದ್ದಾರೆ. ಕಳೆದ ಪಂಚಾಯತಿ ಚುನಾವಣೆಯಲ್ಲಿ, ಎಲ್‍ಡಿಎಫ್ ಬಿಜೆಪಿಗಿಂತ ಕೇವಲ 80 ಮತಗಳ ಹಿಂದಿತ್ತು. ಇಂದು ಆ ಪರಿಸ್ಥಿತಿ ಇಲ್ಲ. ಕೋವಿಡ್ ಅವಧಿಯಲ್ಲಿ, ಯುಡಿಎಫ್ ಕಾರ್ಯಕರ್ತರು ಇತರ ವಾರ್ಡ್‍ಗಳಿಂದ ತಂದು ಮತದಾರರ ಪಟ್ಟಿಯಲ್ಲಿ ಸೇರಿಸಲಾದ ಸುಮಾರು 250 ಮತಗಳನ್ನು ಈ ವರ್ಷ ತೆಗೆದುಹಾಕಲಾಗಿದೆ. ಇದಲ್ಲದೆ, ಇತರ ವಾರ್ಡ್‍ಗಳಿಂದ ಅನೇಕ ಎಡ ಮತಗಳನ್ನು ವಾರ್ಡ್ ವಿಭಜನೆಯಲ್ಲಿ 22 ನೇ ವಾರ್ಡ್‍ಗೆ ಹೊಸದಾಗಿ ಸೇರಿಸಲಾಗಿದೆ. ಇವೆರಡೂ ಎಲ್‍ಡಿಎಫ್ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಪ್ರಸ್ತುತ, ಎಲ್‍ಡಿಎಫ್ ಮತ್ತು ಬಿಜೆಪಿ ನಡುವೆ ಕಠಿಣ ಸ್ಪರ್ಧೆ ಇದೆ. ಯುಡಿಎಫ್ ಗೆಲ್ಲಲು ವಾರ್ಡ್‍ನಲ್ಲಿ ಸಾಕಷ್ಟು ಮತಗಳನ್ನು ಹೊಂದಿಲ್ಲ ಎಂದು ಎಲ್‍ಡಿಎಫ್ ನಂಬಿದೆ. ಒಟ್ಟು 1800 ಮತಗಳಲ್ಲಿ 1300 ಮತಗಳು ಚಲಾವಣೆಯಾದರೆ, ಎಲ್‍ಡಿಎಫ್‍ಗೆ 500 ಕ್ಕೂ ಹೆಚ್ಚು ಮತಗಳು ಖಚಿತ. ಉಳಿದ ಮತಗಳು ಯುಡಿಎಫ್ ಮತ್ತು ಬಿಜೆಪಿ ನಡುವೆ ಹಂಚಿಕೆಯಾದರೆ, ಎಲ್‍ಡಿಎಫ್ ಉತ್ತಮ ಅಂತರದಿಂದ ಗೆಲ್ಲುತ್ತದೆ ಎಂದು ಎಲ್‍ಡಿಎಫ್ ಈಗಾಗಲೇ ಅವಲೋಕನದಲ್ಲಿ ತಿಳಿದುಕೊಂಡಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಸಿಇದರು. ಎಲ್‍ಡಿಎಫ್ ವಾರ್ಡ್ ಸಂಚಾಲಕ ಮುನೀರ್, ಚುನಾವಣಾ ಉಸ್ತುವಾರಿ ಇರ್ಷಾದ್ ಚಾಕೊ ಮತ್ತು ವಕೀಲ ಉದಯಕುಮಾರ್ ಗಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

.jpg)
