ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದ ಜತೆಗೆ ಕೆಲಸ ಮಾಡಿ ಆದಾಯ ಗಳಿಸುವ ಅವಕಾಶವನ್ನು ಒದಗಿಸಿದೆ. 'ನೀವು ಕಲಿಯುವಾಗ ಸಂಪಾದಿಸಿ' ಯೋಜನೆ ಆರ್ಥಿಕವಾಗಿ ಹಿಂದುಳಿದವರಿಗೆ ಪ್ರಯೋಜನಕಾರಿಯಾಗಿದೆ.
ಯೋಜನೆಯನ್ನು ವಿಶ್ವವಿದ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಪ್ರಾರಂಭಿಸಲಾಗಿದೆ. ಉಪಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯೋಜನೆ ಆರ್ಥಿಕ ನೆರವು ನೀಡುವುದರ ಜತೆಗೆ, ವಿದ್ಯಾರ್ಥಿಗಳಲ್ಲಿ ಸಹೋದರತ್ವ ಮತ್ತು ಜವಾಬ್ದಾರಿಯ ಮನೋಭಾವ ಮೂಡಿಸುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿಯೂ ಇದು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪೆÇ್ರ.ರಾಜೇಂದ್ರ ಪಿಲಾಂಗಟ್ಟೆ, ಗ್ರಂಥಾಲಯ ಸಮಿತಿ ಅಧ್ಯಕ್ಷ ಪೆÇ್ರ.ಡೆನ್ನಿಸ್ ಥಾಮಸ್, ಪ್ರಭಾರ ಗ್ರಂಥಪಾಲಕ ಡಾ.ಪಿ.ಸೆಂಥಿಲ್ ಕುಮಾರನ್, ವಿದ್ಯಾರ್ಥಿ ಕಲ್ಯಾಣ ಸಹಾಯಕ ಡೀನ್ ಪೆÇ್ರ.ಡಾ. ಎಸ್. ಅನ್ಬಳಗಿ ಉಪಸ್ಥಿತರಿದ್ದರು.
ಗ್ರಂಥಾಲಯ ವಿಭಾಗದಲ್ಲಿರುವವರುಒಳಗೊಂಡಂತೆ 40ಮಂದಿ ಯೋಜನೆ ಫಲಾನುಭವಿಗಳಾಗಿದ್ದಾರೆ. ಪ್ರತಿ ದಿನ ತರಗತಿ ನಂತರ ಅಧ್ಯಯನದ ಮೇಲೆ ಪರಿಣಾಮ ಬೀರದಂತೆ ಇದಕ್ಕಾಗಿ ಸಮಯವನ್ನು ಮೀಸಲಿಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಅವರ ಆಸಕ್ತಿ ಮತ್ತು ಸಾಮಥ್ರ್ಯಕ್ಕನುಗುಣವಾದ ಕ್ಷೇತ್ರಗಳಲ್ಲಿ ಉದ್ಯೋಗ ನೀಡಲಾಗುತ್ತದೆ. ಇದು ಅವರ ಕೌಶಲ್ಯ ಅಭಿವೃದ್ಧಿ ಮತ್ತು ಕೆಲಸದ ಅನುಭವ ಹೆಚ್ಚಿಸಲು ಸಹಾಯ ಮಾಡಿಕೊಡಲಿದೆ. ಇದಕ್ಕಾಗಿ ವಿಶ್ವವಿದ್ಯಾಲಯವು ದತ್ತಾಂಶ ಸಂಗ್ರಹವನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ಷೇತ್ರಗಳಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಿ, ಹೆಚ್ಚಿನ ವಿದ್ಯಾರ್ಥಿಗಳನ್ನು ಯೋಜನೆಯಲ್ಲಿ ಶಾಮೀಲುಗೊಳಿಸಲು ತೀರ್ಮಾನಿಸಿರುವುದಾಗಿ ವಿಶ್ವ ವಿದ್ಯಾಲಯ ಪ್ರಕಟಣೆ ತಿಳಿಸಿದೆ.





