ಅದರಲ್ಲೂ ರಷ್ಯಾ ತನ್ನ ಉಗ್ರಾಣದಲ್ಲಿ ಅಡಗಿಸಿ ಇಟ್ಟಿದ್ದ ಅಷ್ಟೂ ಅಸ್ತ್ರಗಳನ್ನು ದಿಢೀರ್ ಹೊರಗೆ ತೆಗೆದು ಉಕ್ರೇನ್ ನಾಶ ಮಾಡಲು ಮುಂದಾಗುತ್ತಿದೆ.
ಹೇಗಾದರೂ ಮಾಡಿ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಪ್ತಯತ್ನ ಮಾಡುತ್ತಲೇ ಬಂದಿದ್ದಾರೆ. ಅಮೆರಿಕ ಒತ್ತಡ ಹೇರುತ್ತಿರುವ ಸಮಯದಲ್ಲಿ ಉಕ್ರೇನ್ ಚಿಂತನೆ ನಡೆಸುತ್ತಿದ್ದು ಯುದ್ಧ ನಿಲ್ಲಿಸಿ ಸೈಲೆಂಟ್ ಆಗಬೇಕಾ? ಅಥವಾ ರಷ್ಯಾ ವಿರುದ್ಧ ಇನ್ನೂ ಯುದ್ಧ ಮಾಡಬೇಕಾ? ಎಂಬ ಗೊಂದಲದಲ್ಲಿ ಈಗಲೂ ಒದ್ದಾಡುತ್ತಿದೆ ಉಕ್ರೇನ್. ಈಗಿನ ಪರಿಸ್ಥಿತಿಯಲ್ಲಿ ಉಕ್ರೇನ್ ಕೂಡ ಕದನ ವಿರಾಮ ಘೋಷಣೆಗೆ ಒಪ್ಪಿಗೆ ಸೂಚಿಸುವುದು ಬಹುತೇಕ ಖಚಿತವಾಗಿದೆ. ಆದರೆ ಯುದ್ಧದ ಕಾರ್ಮೋಡ ಮಾತ್ರ ಕಣ್ಮರೆ ಆಗುತ್ತಿಲ್ಲ. ಇಷ್ಟೆಲ್ಲದರ ನಡುವೆ ಇಂದು ರಷ್ಯಾ ಸೇನೆ ಕ್ಷಿಪಣಿ & ಡ್ರೋನ್ ದಾಳಿ ನಡೆಸಿರುವ ಆರೋಪ ಕೇಳಿ ಬಂದಿದೆ.
ರಷ್ಯಾ ಸೇನೆ ಕೊತ... ಕೊತ...
ಹೌದು, ಉಕ್ರೇನ್ ಒಪ್ಪಿಕೊಳ್ಳದ ಪರಿಣಾಮ ಈಗಲೂ ರಷ್ಯಾ & ಉಕ್ರೇನ್ ನಡುವಿನ ಶಾಂತಿ ಒಪ್ಪಂದ ಮರೀಚಿಕೆಯಾಗಿದೆ. ಇಂತಹ ಸಮಯದಲ್ಲೇ ರಷ್ಯಾ ಸೇನೆಯಿಂದ ಡೆಡ್ಲಿ ಅಟ್ಯಾಕ್ ಕೂಡ ನಡೆದಿದ್ದು, ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ಹಾಗೂ ಇತರ ಮೂಲಗಳಿಂದ ಉಕ್ರೇನ್‌ಗೆ ಆಘಾತ ನೀಡುತ್ತಿರುವ ಭಾರಿ ಗಂಭೀರ ಆರೋಪ ಕೇಳಿ ಬಂದಿದೆ.




