ತಿರುವನಂತಪುರಂ: ಅಗಸ್ತ್ಯ ಅರಣ್ಯದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಪೋಲೀಸ್ ಅಧಿಕಾರಿಗೆ ಹಾವು ಕಚ್ಚಿದೆ. ನೆಯ್ಯಾಟ್ಟಿಂಗರ ಪೆÇಲೀಸ್ ಠಾಣೆಯ ಅನೀಶ್‍ಗೆ ಹಾವು ಕಚ್ಚಿದೆ.
ಈ ಘಟನೆ ಪೆÇಡಿಯಂ ಉನ್ನತಿಯಲ್ಲಿ ನಡೆದಿದೆ. ಕುಟ್ಟಿಚಲ್ ಪಂಚಾಯತ್‍ನಲ್ಲಿರುವ ಅರಣ್ಯದಲ್ಲಿರುವ ಏಕೈಕ ಮತಗಟ್ಟೆ ಪೋಡಿಯಂ ಉನ್ನತಿ.
ಅನೀಶ್ ಸ್ನಾನ ಮಾಡಲು ತೆರಳಿದ್ದಾಗ ನಿನ್ನೆ ರಾತ್ರಿ ಹಾವು ಕಚ್ಚಿದೆ ಎಂದು ಉನ್ನತಿಯ ನಿವಾಸಿಗಳು ಹೇಳುತ್ತಾರೆ. ಸೋಮವಾರ ಬೆಳಿಗ್ಗೆ ಚುನಾವಣಾ ಕರ್ತವ್ಯಕ್ಕಾಗಿ ಅನೀಶ್ ಉನ್ನತಿಗೆ ತಲುಪಿದರು. ಅವರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

