HEALTH TIPS

ಸೋದರನ ಮಗನೊಂದಿಗೆ ಮಗಳ ವಿವಾಹ ಮಾಡಿಸಿದ ಪಾಕ್ ಸೇನಾ ಮುಖ್ಯಸ್ಥ ಮುನೀರ್

ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ತಮ್ಮ ಪುತ್ರಿ ಮಹ್ನೂರ್ ಅವರನ್ನು ಸೋದರನ ಪುತ್ರನಿಗೆ ನೀಡಿ ವಿವಾಹ ಮಾಡಿದ್ದಾರೆ.

ಸೋದರ ಕಾಸಿಮ್ ಮುನೀರ್ ಪುತ್ರ ಅಬ್ದುಲ್ ರೆಹಮಾನ್‌ ಜತೆ ಪುತ್ರಿ ಮಹ್ನೂರ್‌ ವಿವಾಹ ಮಾಡಿಸಿದ್ದಾರೆ. ಈ ಮೂಲಕ ಸೋದರನ ಮಗನನ್ನು ಮುನೀರ್ ಅಳಿಯನನ್ನಾಗಿ ಮಾಡಿಕೊಂಡಿದ್ದಾರೆ.

ವಿವಾಹವು ರಾವಲ್ಪಿಂಡಿಯ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿಯಲ್ಲಿ ಡಿ.26ರಂದು ಅದ್ಧೂರಿಯಾಗಿ ನೆರವೇರಿದೆ. ಹೀಗಿದ್ದೂ ವಿವಾಹ ಸಮಾರಂಭದ ಯಾವುದೇ ಫೋಟೊಗಳು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ.

ಮುನೀರ್ ಅವರು ನಾಲ್ಕು ಹೆಣ್ಣುಮಕ್ಕಳ ತಂದೆಯಾಗಿದ್ದು, ಈಗ ಮೂರನೇ ಮಗಳ ಮದುವೆ ನೆರವೇರಿದೆ.

ವಿವಾಹದಲ್ಲಿ ದೇಶದ ಪ್ರಮುಖ ರಾಜಕೀಯ ನಾಯಕರಾದ ಪ್ರಧಾನಿ ಶೆಹಬಾಜ್ ಷರೀಫ್, ಅಧ್ಯಕ್ಷ ಆಸಫಿ ಅಲಿ ಜರ್ದಾರಿ, ಉಪಪ್ರಧಾನಿ ಇಶಾಕ್ ದಾರ್, ಐಎಸ್‌ಐ ಮುಖ್ಯಸ್ಥ ಮತ್ತು ನಿವೃತ್ತ ಜನರಲ್‌ಗಳು ಭಾಗಿಯಾಗಿದ್ದರು.

ಅಬ್ದುಲ್ ರೆಹಮಾನ್ ಕೂಡ ಪಾಕಿಸ್ತಾನ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ನಂತರ ಸೇನಾ ಅಧಿಕಾರಿಗಳಿಗೆ ಮೀಸಲಾದ ಕೋಟಾದ ಮೂಲಕ ನಾಗರಿಕ ಸೇವೆಗಳಿಗೆ ಸೇರಿದ್ದು, ಪ್ರಸ್ತುತ ಸಹಾಯಕ ಆಯುಕ್ತರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ತಿಳಿಸಿದೆ.

'ಮದುವೆಯಲ್ಲಿ 400 ಅತಿಥಿಗಳು ಭಾಗಿಯಾಗಿದ್ದರು ಆದರೆ ಭದ್ರತಾ ಕಾರಣಗಳಿಂದ ಸಮಾರಂಭದಲ್ಲಿ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ' ಎಂದು ಪಾಕಿಸ್ತಾನದ ಪತ್ರಕರ್ತ ಜಾಹಿದ್‌ ಗಿಸ್ಕೋರಿ ಹೇಳಿರುವುದಾಗಿ ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries