ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಮಳೆ ನಡುವೆಯೂ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಿದರು.
ನ್ಯೂಜಿಲೆಂಡ್‌ನ ಅತಿ ಎತ್ತರದ ಕಟ್ಟಡ ಎಂದೇ ಖ್ಯಾತವಾಗಿರುವ ಸ್ಕೈ ಟವರ್ ಮೇಲೆ ಮಧ್ಯರಾತ್ರಿ 12 ಗಂಟೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
240 ಮೀ ಎತ್ತರದ ಸ್ಕೈ ಟವರ್ ಮೇಲಿನಿಂದ ಸತತ 5 ನಿಮಿಷಗಳ ಕಾಲ 3,500ಕ್ಕೂ ಅಧಿಕ ಪಟಾಕಿಗಳನ್ನು ಸಿಡಿಸಲಾಗಿದೆ.
ಹವಾಮಾನ ತಜ್ಞರು ನ್ಯೂಜಿಲೆಂಡ್‌ನಲ್ಲಿ ಬಾರಿ ಮಳೆಯ ಮುನ್ನೆಚ್ಚರಿಕೆ ನೀಡಿದ್ದರಿಂದ, ದೇಶದ ವಿವಿಧ ಕಡೆಗಳಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿತ್ತು.
ದಕ್ಷಿಣ ಫೆಸಿಫಿಕ್ ದೇಶಗಳಲ್ಲಿ ಕಾಲಮಾನ ಮುಂದಿದ್ದು, ಆ ದೇಶಗಳು ಎಲ್ಲರಿಗಿಂತ ಮೊದಲು ಹೊಸ ವರ್ಷಕ್ಕೆ ಕಾಲಿಡುತ್ತವೆ.
ನ್ಯೂಜಿಲೆಂಡ್‌ನಲ್ಲಿನ ದ್ವೀಪವಾಗಿರುವ ಆಕ್ಲೆಂಡ್‌ನಲ್ಲಿ ಎಲ್ಲಾ ಪ್ರದೇಶಗಳಿಗಿಂತ ಮೊದಲು ಹೊಸ ವರ್ಷಾಚರಣೆ ಮಾಡಲಾಗುತ್ತದೆ.

