ಕಾಸರಗೋಡು: ವಿವಾದಿತ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಹೊಸದುರ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂಬ ವದಂತಿಗಳ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆವರಣದಲ್ಲಿ ಭಾರಿ ಪೋಲೀಸ್ ನಿಯೋಜನೆ ಮಾಡಿದ ಹೈ ಡ್ರಾಮಾಕ್ಕೆ ನಿನ್ನೆ ಸಂಜೆ ಹೊಸದುರ್ಗ ನ್ಯಾಯಾಲಯ ಆವರಣ ಸಾಕ್ಷಿಯಾಯಿತು. ಆದಾಗ್ಯೂ, ಈ ಬಗ್ಗೆ ಪೆÇಲೀಸರಿಂದ ಯಾವುದೇ ದೃಢೀಕರಣ ಬಂದಿಲ್ಲ.
ಆರಂಭದಲ್ಲಿ, ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿದ ನಂತರ ಎಸ್‍ಐಟಿ ರಾಹುಲ್ ಅವರನ್ನು ವಶಕ್ಕೆ ಪಡೆದುಕೊಂಡಿದೆ ಮತ್ತು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಮುಂದಾಗಿದೆ ಎಂಬ ಸೂಚನೆಗಳಿದ್ದವು.
ಕಾಸರಗೋಡಿನ ಹೊಸದುರ್ಗ ನ್ಯಾಯಾಲಯಕ್ಕೆ ರಾಹುಲ್ ಮಾಂಕೂಟತ್ತಿಲ್ ಅವರನ್ನು ಹಾಜರುಪಡಿಸಲಾಗುವುದು ಎಂಬ ಸೂಚನೆಗಳ ನಡುವೆ ಸ್ಥಳದಲ್ಲಿ ಭಾರಿ ಪೋಲೀಸ್ ನಿಯೋಜನೆ ಮಾಡಲಾಗಿತ್ತು.
ಡಿವೈಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ಪೋಲೀಸ್ ನಿಯೋಜನೆ ಮಾಡಲಾಗಿತ್ತು. ರಾಹುಲ್ ಮಾಂಕೂಟತ್ತಿಲ್ ಅವರನ್ನು ಈ ನ್ಯಾಯಾಲಯದಲ್ಲಿ ಹಾಜರುಪಡಿಸಬಹುದು ಎಂಬ ಸೂಚನೆಗಳಿವೆ.
ಬಿಜೆಪಿ ಹಾಗೂ ಸಿಪಿಎಂ ಕಾರ್ಯಕರ್ತರು ಕೂಡ ನ್ಯಾಯಾಲಯದ ಮುಂದೆ ಪ್ರತಿಭಟನೆ ನಡೆಸಲು ಆಗಮಿಸಿದ್ದರು. ರಾಹುಲ್ ಬಂದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದರು. ನ್ಯಾಯಾಲಯದ ದ್ವಾರವನ್ನು ಪೋಲೀಸರು ಮುಚ್ಚಿದರು. ನ್ಯಾಯಾಲಯದ ಹೊರಗೆ ಪೋಲೀಸರು ನಿಯೋಜನೆಗೊಂಡಿರುವ ಮಧ್ಯೆ ನೂರಾರು ಸಂಖ್ಯೆಯ ಸಾರ್ವಜನಿಕರು ಕೂಡಾ ಜಮಾಯಿಸಿದ್ದರು.
ರಾಹುಲ್ ಬಂಧನದಲ್ಲಿಲ್ಲ ಎಂದ ಕಾಸರಗೋಡು ಎಸ್ಪಿ:
ಅತ್ಯಾಚಾರ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಬಂಧಿಸಿಲ್ಲ ಎಂದು ಕಾಸರಗೋಡು ಎಸ್ಪಿ ಹೇಳಿದ್ದಾರೆ. ರಾಹುಲ್ ನ್ಯಾಯಾಲಯಕ್ಕೆ ಹಾಜರಾಗುವ ಸಾಧ್ಯತೆ ಇದೆ ಎಂಬ ಮಾಹಿತಿಯ ನಂತರ ಪೋಲೀಸರನ್ನು ನಿಯೋಜಿಸಲಾಗಿತ್ತು. ಹೊಸದುರ್ಗ ನ್ಯಾಯಾಲಯದ ಆವರಣದಲ್ಲಿ ನಿಯೋಜಿಸಲಾದ ಪೆÇಲೀಸರನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ಹೇಳಿದರು.
ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯವು ಜಾಮೀನು ನಿರಾಕರಿಸಿದ ನಂತರ ಎಸ್.ಐ.ಟಿ ರಾಹುಲ್ ಅವರನ್ನು ವಶಕ್ಕೆ ಪಡೆದುಕೊಂಡಿದೆ ಮತ್ತು ನ್ಯಾಯಾಲಯಕ್ಕೆ ಹಾಜರುಪಡಿಸುತ್ತದೆ ಎಂಬ ವದಂತಿಗಳು ಹರಡಿದ್ದವು.





