HEALTH TIPS

ಮಲಯಾಳ ನಟಿಗೆ ಲೈಂಗಿಕ ಕಿರುಕುಳ: ಶಿಕ್ಷೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ಅಪರಾಧಿ

 ಕೊಚ್ಚಿ: ಮಲಯಾಳ ನಟಿ ಮೇಲೆ 2017ರಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಅಪರಾಧಿಯೊಬ್ಬರು ತಮಗೆ ವಿಧಿಸಲಾದ ಶಿಕ್ಷೆಯನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಅಪರಾಧ ಕೃತ್ಯದಲ್ಲಿ ತನ್ನ ಪಾತ್ರವಿಲ್ಲ ಎಂಬುದನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಶಿಕ್ಷೆ ವಿಧಿಸಿರುವ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಾರ್ಟಿನ್‌ ಮೇಲ್ಮನವಿ ಸಲ್ಲಿಸಿದ್ದಾರೆ. 


ಈ ಪ್ರಕರಣದ ಆರೋಪಪಟ್ಟಿಯಲ್ಲಿ ಇವರದ್ದು ಎರಡನೇ ಹೆಸರು. ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿದ್ದು ಮಲಯಾಳದ ನಟ ದಿಲೀಪ್ ಹೆಸರು. ಆದರೆ ಇವರನ್ನು ನ್ಯಾಯಾಲಯ ಖುಲಾಸೆಗೊಳಿಸಿತು.

ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ| ಮಲಯಾಳ ನಟ ದಿಲೀಪ್‌ ಖುಲಾಸೆಗೊಳಿಸಿದ ಕೋರ್ಟ್ನಟಿಗೆ ಲೈಂಗಿಕ ಕಿರುಕುಳ: ಪ್ರಕರಣದಲ್ಲಿ ನಟಿ ಕಾವ್ಯಾ ಮಾಧವನ್ ಕೈವಾಡ?

'ಇಡೀ ಘಟನೆಯಲ್ಲಿ ನಾನು ಸಂತ್ರಸ್ತೆಗೆ ನೆರವಾಗಿದ್ದೆ. ಆದರೆ ಅದರ ಬದಲು ನನ್ನ ವಿರುದ್ಧ ನಕಲಿ ಅಪಘಾತ ಸೃಷ್ಟಿಸಿದ, ಅಪಹರಣ ಮಾಡಿದ, ಸಾಕ್ಷ್ಯ ನಾಶ ಮಾಡಿದ ಹಾಗೂ ಮೊಬೈಲ್ ಫೋನ್ ಸಿಮ್ ಕಾರ್ಡ್‌ ನಾಶ ಮಾಡಿದ ಆರೋಪವನ್ನು ನನ್ನ ಮೇಲೆ ಹೊರಿಸಲಾಗಿದೆ. ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಇತರರೊಂದಿಗೆ ಘಟನೆ ಪೂರ್ವದಲ್ಲಿ ಸಂಬಂಧ ಹೊಂದಿರುವ ಅಥವಾ ಘಟನೆಗೆ ಸಹಕರಿಸಿದ ಯಾವುದೇ ಅಂಶವನ್ನು ಪ್ರಾಸಿಕ್ಯೂಷನ್‌ ಪ್ರಸ್ತುತಪಡಿಸಿದ ಸಾಕ್ಷ್ಯಗಳು ಸಾಬೀತು ಮಾಡಿಲ್ಲ. ಈ ಅಂಶವನ್ನು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯವೂ ತನ್ನ ವರದಿಯಲ್ಲಿ ದಾಖಲಿಸಿದೆ' ಎಂಬ ಅಂಶವನ್ನು ಮಾರ್ಟಿನ್ ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

'ಇಂಥದ್ದೇ ಆರೋಪ ಎದುರಿಸುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಹೀಗಾಗಿ ಪ್ರಕರಣ ಒಂದೇ ರೀತಿಯದ್ದಾದರೂ ಮತ್ತು ಸಾಕ್ಷಿಗಳು ಲಭ್ಯವಿಲ್ಲ ಎಂಬುದು ನ್ಯಾಯಾಲಯವೇ ಹೇಳಿದ್ದರೂ ಭಿನ್ನ ಆದೇಶಗಳನ್ನು ಹೊರಡಿಸಿರುವುದು ಸರಿಯಲ್ಲ' ಎಂದು ಹೈಕೋರ್ಟ್‌ಗೆ ಸಲ್ಲಿಸಿರುವ ಮನವಿಯಲ್ಲಿ ಹೇಳಿದ್ದಾರೆ.

2017ರಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡು ತ್ರಿಶೂರ್‌ನಿಂದ ಎರ್ನಾಕುಲಂನತ್ತ ಪ್ರಯಾಣಿಸುತ್ತಿದ್ದ ನಟಿಯನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ವಾಹನದಲ್ಲಿ ನಡೆದ ಈ ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನನ್ವಯ ನಟ ದಿಲೀಪ್ ಅವರನ್ನು ಬಂಧಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳ ಹಂತದ ನ್ಯಾಯಾಲಯವು ಡಿ. 8ರಂದು ಆದೇಶ ಪ್ರಕಟಿಸಿತ್ತು. ಇದರಲ್ಲಿ ನಟ ದಿಲೀಪ್ ಹಾಗೂ ಇತರ ಮೂವರನ್ನು ಖುಲಾಸೆಗೊಳಿಸಿತ್ತು. ಆರು ಅಪರಾಧಿಗಳಿಗೆ ತಲಾ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries