ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿ ತೌಡುಗೋಳಿ ಸಂಕೊಲಿಗೆಯಲ್ಲಿ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನುಬಂಧಿಸಿದ್ದಾರೆ. ಬಂಟ್ವಾಳ ನಿವಾಸಿ ಕೆ. ಪ್ರದೀಪ (31), ಆತಿಷ್ ಕುಮಾರ್ (30)ಬಂಧಿತರು. ಇವರಿಂದ ಅಂಕಕ್ಕೆ ಬಳಸಲಾದ ಎರಡು ಕೋಳಿ ಹಾಗೂ ಜೂಜಿಗೆ ಬಳಸಿದ್ದರೆನ್ನಲಾದ 2ಸಾವಿರ ರಊ. ನಗದು ವಶಪಡಿಸಿಕೊಳ್ಳಲಾಗಿದೆ.
ಮಂಜೇಶ್ವರ ಠಾಣೆ ಎಸ್. ಐ ನೇತೃತ್ವದ ಪೊಲೀಸರ ತಂಡ ತೌಡುಗೋಳಿ ಸಂಕೊಲಿಗೆಯ ಶ್ರೀಮಹಾಮಾಯ ದೇವಳದ ಬಳಿ ನಡೆಯುತ್ತಿದ್ದ ಕೋಳಿ ಅಂಕದ ಬಗ್ಗೆ ಮಹಿತಿ ಪಡೆದು, ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭ ಕೋಳಿ ಸಹಿತ ಜನರು ಚದುರಿ ಓಡಿದ್ದು, ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

