ಲಾಹೋರ್: 'ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ಅವರ ಸಹೋದರಿಗೆ ಪಾಕಿಸ್ತಾನ ಸರ್ಕಾರ ಅನುಮತಿ ನೀಡಿದೆ.
ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ವರ್ಷಕ್ಕೂ ಹೆಚ್ಚು ಅವಧಿಯಿಂದ ಇಮ್ರಾನ್ ಖಾನ್ ಅವರು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿದ್ದಾರೆ.
ಹಲವು ದಿನಗಳಿಂದ ಅವರು ಸಾವಿನ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡಿದ್ದವು. ಕುಟುಂಬದ ಸದಸ್ಯರು ಕೂಡ ಭೇಟಿಯಾಗಲು ಅನುಮತಿ ಕೋರಿದ್ದರು. ಈಗ ಅವರ ಸಹೋದರಿ ಡಾ. ಉಜ್ಮಾ ಖಾನ್‌ಗೆ ಭೇಟಿಯಾಗಲು ಅನುಮತಿ ನೀಡಲಾಗಿದೆ.
'ಇಮ್ರಾನ್ ಖಾನ್ ಆರೋಗ್ಯವಾಗಿದ್ದಾರೆ' ಎಂದು ಅಡಿಯಾಲಾ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.




