ಕಾಸರಗೋಡು: ತ್ರಿಸ್ತರ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಸಾಮಗ್ರಿ ವಿತರಣೆ ಮತ್ತು ಸ್ವೀಕೃತಿ ಕೇಂದ್ರಗಳನ್ನು ಹೊಂದಿರುವ ಸ್ಟ್ರಾಂಗ್ ರೂಮ್‍ಗಳು ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಇಂದು(ಡಿ. 8) ರಜೆ ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಖಾರಿ ಕೆ. ಇನ್ಬಾಶೇಖರ್ ಆದೇಶ ನೀಡಿದ್ದಾರೆ.
ಮಂಜೇಶ್ವರ ಬ್ಲಾಕ್‍ನ ಜಿಎಚ್‍ಎಸ್‍ಎಸ್ ಕುಂಬಳೆ, ಕಾಸರಗೋಡು ಬ್ಲಾಕ್‍ನ ಕಾಸರಗೋಡು ಸರ್ಕಾರಿ ಕಾಲೇಜು, ಕಾರಡ್ಕ ಬ್ಲಾಕ್‍ನ ಬಿ.ಆರ್.ಎಚ್.ಎಸ್.ಎಸ್. ಬೋವಿಕ್ಕಾನ, (ಎಚ್‍ಎಸ್‍ಎಸ್, ಎಚ್‍ಎಸ್ ಹಾಗೂ ಯುಪಿ), ಕಾಞಂಗಾಡ್ ಬ್ಲಾಕ್‍ನ ದುರ್ಗಾ ಎಚ್‍ಎಸ್‍ಎಸ್, ಕಾಞಂಗಾಡ್, ನೀಲೇಶ್ವರ ನಗರಸಭೆಯ ರಾಜಾಸ್ ಎಚ್‍ಎಸ್‍ಎಸ್, ನೀಲೇಶ್ವರ, ಪರಪ್ಪ ಬ್ಲಾಕ್‍ನ ಜಿಎಚ್‍ಎಸ್‍ಎಸ್ ಪರಪ್ಪ, ನೀಲೇಶ್ವರ ಬ್ಲಾಕ್‍ನ ನೆಹರು ಕಾಲೇಜು ಪಡನ್ನಕ್ಕಾಡ್, ಕಾಞಂಗಾಡ್ ನಗರಸಭೆಯ ಹೊಸದುರ್ಗ ಸರ್ಕಾರಿ ಪ್ರೌಢಶಾಲೆಗೆ ರಜೆ ಘೋಷಿಸಲಾಗಿದೆ.

