HEALTH TIPS

ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ-ಕಾಸರಗೋಡಲ್ಲಿ ಶಾಂತಿಯುತ ಮತದಾನ

ಕಾಸರಗೋಡು: ಕೇರಳದಲ್ಲಿ ಕಾಸರಗೋಡು ಸೇರಿದಂತೆ ಏಳು ಜಿಲ್ಲೆಗಳ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಗುರುವಾರ ನಡೆದ ತ್ರಿಸ್ತರ ಪಂಚಾಯಿತಿ ಚುನಾವಣೆ ಶಾಂತಯುತವಾಗಿ ಕೊನೆಗೊಂಡಿದೆ.  ಒಟ್ಟು 11,12,190 ಮತದಾರರು ಮತದಾರರಿದ್ದು,  ಇವರಲ್ಲಿ5,24022 ಐದು ಲಕ್ಷ ಇಪ್ಪತ್ತನಾಲ್ಕು ಸಾವಿರದ ಇಪ್ಪತ್ತೆರಡು ಪುರುಷರು ಮತ್ತು 588156 ಮಹಿಳೆಯರು, 12 ಮಂದಿ ಟ್ರಾನ್ಸ್‍ಜೆಂಡರ್ ಮತ್ತು 129 ಅನಿವಾಸಿ ಮತದಾರರಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆದಿದೆ. ಸಂಜೆ 6 ಗಂಟೆಗೆ ಸರತಿ ಸಾಲಿನಲ್ಲಿ ನಿಂತಿದ್ದ ಎಲ್ಲಾ ಮತದಾರರಿಗೆ ಟೋಕನ್ ನೀಡಿ ಮತದಾನ ಮಾಡಲು ಅವಕಾಶ ನೀಡಲಾಗಿತ್ತು.  ಜಿಲ್ಲೆಯಾದ್ಯಂತ 119 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿತ್ತು. ಇಂತಹ ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ಪ್ರಕ್ರಿಯೆ ನಡೆಯಿತು 

2855 ಅಭ್ಯರ್ಥಿಗಳು:

ಜಿಲ್ಲೆಯಲ್ಲಿ ಒಟ್ಟು ಸ್ಪರ್ಧಿಗಳ ಸಂಖ್ಯೆ 2855. ಜಿಲ್ಲಾ ಪಂಚಾಯತ್‍ನಲ್ಲಿ ಪುರುಷರು 1382 ಮಹಿಳೆಯರು 1473 62 ಅಭ್ಯರ್ಥಿಗಳು, ಬ್ಲಾಕ್ ಪಂಚಾಯತ್‍ನಲ್ಲಿ 293 ಅಭ್ಯರ್ಥಿಗಳು, ಗ್ರಾಮ ಪಂಚಾಯತ್‍ಗಳಲ್ಲಿ 2167 ಅಭ್ಯರ್ಥಿಗಳು ಮತ್ತು ನಗರಸಭೆಗಳಲ್ಲಿ 333 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದರು.  


ಚಿತ್ರ:  ಕಾಸರಗೋಡು ನಗರಸಭಾ ಕಡಪ್ಪುರ ಮತ್ಸ್ಯಭವನ ಮತಗಟ್ಟೆಯಲ್ಲಿ ಮತದಾರರ ಸರತಿಸಾಲು.



 


 









 






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries