ಪೆರ್ಲ :ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಎಣ್ಮಕಜೆ ಪಂಚಾಯಿತಿ ಆರನೇ ಪೆರ್ಲ ನಾರ್ತ್ ಬೂತಿನ ಮತಯಂತ್ರ ಮತದಾನ ಆರಂಭಗೊಂಡ ತಾಸುಗಳೊಳಗೆ ಸ್ಥಗಿತಗೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ಮತಯಂತ್ರವನ್ನು ದುರಸ್ತಿನಡೆಸಿದ್ದು, ಐದು ನಿಮಿಷ ಕಾಲಾವಧಿಯೊಳಗೆ ಮತದಾನಮುಂದುವರಿಸಲಾಗಿದೆ. ಇದೇ ರೀತಿ ಮಧೂರುಪಂಚಾಯಿತಿಯ ಮಾಯಿಪ್ಪಾಡಿಯ ಮತಗಟ್ಟೆಯೊಂದರಲ್ಲೂ ಮತಯಂತ್ರ ನಿಮಿಷಗಳ ಕಾಲ ಕೈಕೊಟ್ಟಿತ್ತು.
ವೀಲ್‍ಚೇರ್‍ಗಾಗಿ ಪರದಾಟ:
ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತ ಎಣ್ಮಕಜೆ ಪಂಚಾಯಿತಿಯ ಮತಗಟ್ಟೆಗಳಲ್ಲಿ ಅನಾರೋಗ್ಯಪೀಡಿತರನ್ನು ಕರೆದೊಯ್ಯಲು ಸಹಾಯವಾಗುವ ಗಾಲಿಕುರ್ಚಿ ಇರಿಸದಿರುವ ಬಗ್ಗೆ ಮತದಾರರು ಅಸಮಧಾನ ವ್ಯಕ್ತಪಡಿಸಿದರು. ನಂತರ ಪೋಲಿಂಗ್ ಅಧಿಕಾರಿ ವಾಹನದ ಬಳಿ ಆಗಮಿಸಿ ಅಸೌಖ್ಯಪಿಡಿತ ಮತದಾರರೊಬ್ಬರ ಮಾಹಿತಿ ಸಂಗ್ರಹಿಸಿ ಸಹಾಯಕನ ಮೂಲಕ ಮತದಾನಕಕೆ ಅವಕಾಶಮಾಡಿಕೊಟ್ಟರು. ಮತದಾರರ ಬೇಡಿಕೆ ಹಿನ್ನೆಲೆಯಲ್ಲಿ ತಾಸುಗಳ ನಂತರ ಬೂತ್‍ಗಳಿಗೆ ಗಾಲಿಕುರ್ಚಿ ಪೂರೈಸಲಾಯಿತು.
ಚಿತ್ರ: ಪೆರ್ಲದ ಮತಗಟ್ಟೆಯೊಂದರಲ್ಲಿ ಅಸೌಖ್ಯಪಿಡಿತ ಮತದಾರರೊಬ್ಬರ ವಾಹನದ ಬಳಿ ಬಂದು ಚುನಾವಣಾಧಿಕಾರಿ ಮಾಹಿತಿ ಸಂಗ್ರಹಿಸಿದರು.


