HEALTH TIPS

ಹೆದ್ದಾರಿಯಲ್ಲಿ ಅಪಘಾತ ತಡೆಗೆ ಕ್ರಮ ಕೈಗೊಳ್ಳುವಂತೆ ಶಾಸಕ ಆಗ್ರಹ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಎಂ.ರಾಜಗೋಪಾಲನ್ ರಾಜ್ಯ ಪಿಡಬ್ಲ್ಯೂಡಿ ಖಾತೆ ಸಚವ ಪಿ.ಎ ಮಹಮ್ಮದ್ ರಿಯಾಸ್ ಅವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ. 


ತಲಪ್ಪಾಡಿ-ಚೆಂಗಳ ರೀಚ್‍ನಲ್ಲಿ ಷಟಪಥ ನಿರ್ಮಾಣಕಾರ್ಯ ಬಹುತೇಕ ಪೂರ್ತಿಗೊಂಡಿದ್ದು, ಕೆಲಸ ಬಾಕಿಯಿರುವ ಕಡೆ ಯಾವುದೇ ಮಾನದಂಡ ಪಾಲಿಸದೆವಾಹನಗಳು ಅತಿಯಾದ ವೇಗದಲ್ಲಿಸಂಚರಿಸುತ್ತಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ. ಕಾಮಗಾರಿಪೂರ್ತಿಗೊಳಿಸಿ, ತಾತ್ಕಾಲಿಕವಾಗಿ ತೆರೆದುಕೊಡಲಾಗಿರುವ ಪ್ರದೇಶದಲ್ಲಿಕಡ್ಡಾಯವಾಗಿ ಸಾರಿಗೆ ನಿಯಂತ್ರಣ ಏರ್ಪಡಿಸಿ ಪ್ರಯಾಣಿಕರ ಸುರಕ್ಷತೆ ಖಾತ್ರಿಪಡಿಸಬೇಕು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶ ನೀಡುವಂತೆಯೂ  ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries