ಕಾಸರಗೋಡು: ಮದ್ಯದ ನಶೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಹಾಜರಾಘಿರುವುದಲ್ಲದೆ, ಮಹಿಳಾ ಪ್ರಿಸೈಡಿಂಗ್ ಅಧಿಕಾರಿ ಜತೆ ಅನುಚಿತವಾಗಿ ವರ್ತಿಸಿದ ಕಾಞಂಗಾಡು ಬೀಟ್ ಕಂಟ್ರೋಲ್ ರೂಮ್ ಸಿಪಿಓ ಸನೂಪ್‍ಜಾನ್ ಎಂಬಾತನ ವಿರುದ್ಧ ಪೊಲಿಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮುಳಿಯಾರು ಪಂಚಾಯಿತಿ ಬೊವಿಕ್ಕಾನ ಎಯುಪಿ ಶಾಲೆಯಲ್ಲಿ ಬುಧವಾರ ಸಂಜೆ ಘಟನೆ ನಡೆದಿದ್ದು, ಪ್ರಿಸೈಡಿಂಗ್ ಅಧಿಖಾರಿ ಅನಸೂಯ ಅವರ ದೂರಿನ ಮೇರೆಗೆ ಈ ಕೇಸು. ಲುಂಗಿ ಮತ್ತು ಟಿಶರ್ಟ್ ಧರಿಸಿ ಸಿಪಿಓ ಸನೂಪ್‍ಜಾನ್ ಕರ್ತವ್ಯಕ್ಕೆ ಹಾಜರಾಗಿದ್ದು, ಈ ಬಗ್ಗೆ ಪ್ರಿಸೈಡಿಂಗ್ ಅಧಿಕಾರಿ ಅನಸೂಯ ಅವರು ಸಮವಸ್ತ್ರ ಧರಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂದರ್ಭ ಅನಸೂಯ ಅವರೊಂದಿಗೆ ಅನುಚಿತವಾಗಿ ವರ್ತಿಸಲಾರಂಭಿಸಿದ್ದು, ಈ ಬಗ್ಗೆ ಸ್ಥಳದಲ್ಲಿದ್ದ ಇತರ ಪೊಲಿಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಂತೆ ಸಿಪಿಓ ಸನೂಪ್‍ಜಾನ್ ತನ್ನ ಬ್ಯಾಗ್ ತೆಗೆದುಕೊಂಡು ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಪರಾರಿಯಾಗಿದ್ದಾನೆ. ಆದೂರು ಠಾಣೆ ಇನ್ಸ್‍ಪೆಕ್ಟರ್ ಎಂ.ವಿ ವಇಷ್ಣುಪ್ರಸಾದ್ ಅವರ ದೂರಿನ ಮೇರೆಗೆ ಕೇಸು ದಾಖಲಾಗಿದೆ.

