ಬದಿಯಡ್ಕ: ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರ ಪುತ್ರ, ಬದಿಯಡ್ಕ ಪೆರಡಾಲ ಕಲ್ಲಕಳಯ ನಿವಾಸಿ ಪ್ರಗತಿಪರ ಕೃಷಿಕ ಕೃಷ್ಣಪ್ರದೀಪ ರೈ(62)ಗುರುವಾರ ಸ್ವಗೃಹದಲ್ಲಿ ನಿಧನರಾದರು. ಬದಿಯಡ್ಕ ಬಳಿಯ ಕಲ್ಲಕಳಯದ ತಮ್ಮ ನಿವಾಸದಲ್ಲಿ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡ ಅಲ್ಪಸಮಯದೊಳಗೆ ಸಾವು ಸಂಭವಿಸಿದೆ. ಹೃದಯಾಘಾತ ಸಾವಿಗೆ ಕಾರಣವೆನ್ನಲಾಗಿದೆ.
ಅವರು ಪತ್ನಿ ಆರತಿ, ಪುತ್ರಿ ಪ್ರಕೃತಿ, ಸಹೋದರರಾದ ದುರ್ಗಾ ಪ್ರಸಾದ್ ರೈ, ಜಯಶಂಕರ್ ರೈ, ಪ್ರಸನ್ನ ರೈ, ದೇವಕಿದೇವಿ, ಕಾವೇರಿ, ರವಿರಾಜ ರೈ ಅವರನ್ನು ಅಗಲಿದ್ದಾರೆ.


