ಸೋಮವಾರ ಸದನದಲ್ಲಿ ಮಂಡಿಸಲಾದ ಈ ಮಸೂದೆಯು 1944ರ ಕೇಂದ್ರ ಅಬಕಾರಿ ಕಾಯ್ದೆಗೆ ತಿದ್ದುಪಡಿಯನ್ನು ಮಾಡಿದೆ.
ಕೇಂದ್ರೀಯ ಅಬಕಾರಿ (ತಿದ್ದುಪಡಿ) ಮಸೂದೆ 2025, ಈಗ ಅಸ್ತಿತ್ವದಲ್ಲಿರುವ ಸಿಗರೇಟುಗಳು,ಜಗಿಯುವ ಹೊಗೆಸೊಪ್ಪು, ಸಿಗಾರ್‌ಗಳು, ಹುಕ್ಕಾ,ಝರ್ದಾ ಹಾಗೂ ಸುವಾಸನೆಯುಕ್ತ ತಂಬಾಕುಗಳ ಮೇಲಿನ ಜಿಎಸ್‌ಟಿ ಪರಿಹಾರ ಸೆಸ್ ಅನ್ನು ತೆರವುಗೊಳಿಸಿ, ಪರಿಷ್ಕೃತ ಅಬಕಾರಿ ಸುಂಕ ಸಂರಚನೆಯನ್ನು ಜಾರಿಗೆ ತರಲಿದೆ.
ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈ ಮಸೂದೆಯು ತಂಬಾಕು ಮೇಲೆ ಯಾವುದೇ ಹೆಚ್ಚುವರಿತೆರಿಗೆಯನ್ನು ವಿಧಿಸುವುದಿಲ್ಲವೆಂದು ತಿಳಿಸಿದರು.




