ಕಾಸರಗೋಡು: ಭಗವನ್ ಶ್ರೀ ಸತ್ಯಸಾಯಿಬಾಬಾ ಅವರ 100ನೇ ಜನ್ಮ ವರ್ಷಾಚರಣೆಯ ಅಂಗವಾಗಿ ದಿವ್ಯ ಯಾತ್ರಾ ಸಮರ್ಪಣಾ ಕಾರ್ಯಕ್ರಮ ನಗರದ ತಾಳಿಪಡ್ಪು ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನದಲ್ಲಿ ಆಯೋಜಿಸಲಾಯಿತು. ಆಚರಣೆಯ ಅಂಗವಾಗಿ ಓಂಕಾರಂ-ಸುಪ್ರಭಾತ ಪಠಣ ನಡೆಸಲಾಯಿತು. ನಾಗರ ಸಂಕೀರ್ತನೆ, ರುದ್ರ ಹೋಮ, ಸಾಯಿ ಗಾಯತ್ರಿ ಹೋಮ, ಸೇವಾ ಸಮರ್ಪಣ, ಮಂಗಳಾರತಿ, ನಾರಾಯಣ ಸೇವೆ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಿಂದ ಶ್ರೀ ಸತ್ಯಸಾಯಿ ರಥದ ಮೆರವಣಿಗೆ ನಡೆಯಿತು. ನಂತರ ಸತ್ಯಸಾಯಿ ಅಭಯನಿಕೇತನದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಚಿನ್ಮಯ ಮಿಷನ್ ಕೇರಳ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಉದ್ಘಾಟಿಸಿದರು.
ಬಿ.ಎಸ್.ಎಸ್. ಅಭಯನಿಕೇತನ ಅಧ್ಯಕ್ಷ ಡಾ.ಎಸ್.ಬಿ.ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ರಾಮಕೃಷ್ಣ ಮಿಷನ್‍ನ ಸ್ವಾಮಿ ಯೋಗಾನಂದಜಿ, ಸತ್ಯಸಾಯಿ ಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷ ಎಚ್.ಮಹಾಲಿಂಗ ಭಟ್, ವೆಂಕಟೇಶ್‍ಅಡಿಗೇರಿ, ವಸಂತ ಪೈ ಬದಿಯಡ್ಕ, ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಸಿರಿಯ, ಮನಶಾಸ್ತ್ರಜ್ಞ ನವೀನ್ ಎಲ್ಲಂಗಳ ಉಪಸ್ಥಿತರಿದ್ದರು. ಪ್ರೇಮ್ ಪ್ರಕಾಶ್ ಸ್ವಾಗತಿಸಿದರು. ಕೆ.ರಾಮಕೃಷ್ಣ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿತು.




