HEALTH TIPS

ಫ್ಯಾಮಿಲಿ ಕೋರ್ಟ್ ಆವರಣದಲ್ಲೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಓರ್ವನ ಬಂಧನ

ಥಾಣೆ: ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಇಬ್ಬರು ಯೂಟ್ಯೂಬರ್​ಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಇಬ್ಬರು ಯೂಟ್ಯೂಬರ್​ಗಳು ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.

ಕಾರಿನೊಳಗೆ ಮಹಿಳೆಯ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಮೂಲಗಳ ಪ್ರಕಾರ ಮಹಿಳೆಗೆ ಕೇಕ್​ನಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ಆಕೆಗೆ ತಿನ್ನಿಸಿ ಎಚ್ಚರ ತಪ್ಪಿಸಿ ಬಳಿಕ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಹೇಳಲಾಗಿದೆ. ಪ್ರಕರಣದ ಆರೋಪಿಗಳು ಯೂಟ್ಯೂಬರ್ ಎಂದು ಹೇಳಲಾಗಿದ್ದು, ಅವರ ವಿರುದ್ಧ ಈಗಾಗಲೇ ಸುಲಿಗೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.

ಒಂದೂವರೆ ವರ್ಷದ ಹಿಂದಿನ ಪ್ರಕರಣ

ಕಳೆದ ವರ್ಷ ಆಗಸ್ಟ್ 25 ರಂದು ಈ ಘಟನೆ ನಡೆದಿತ್ತು. ಪದೇ ಪದೇ ಆಕೆಯನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಿದ ನಂತರ, ಮಹಿಳೆ ಅಂತಿಮವಾಗಿ ಡಿಸೆಂಬರ್ 5 ರಂದು ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುಮಾರು ಒಂದೂವರೆ ವರ್ಷದ ಹಿಂದೆ ಈ ಹಲ್ಲೆ ನಡೆದಿತ್ತು, ಆದರೆ ಆ ಮಹಿಳೆ ಭಯಭೀತಳಾಗಿದ್ದಳು ಮತ್ತು ಯಾರಿಗೂ, ತನ್ನ ಕುಟುಂಬದವರಿಗೂ ಸಹ ಹೇಳಿರಲಿಲ್ಲ. ಆದಾಗ್ಯೂ, ಕಳೆದ ತಿಂಗಳಿನಿಂದ, ಆರೋಪಿಗಳಲ್ಲಿ ಒಬ್ಬಾತ ಆಕೆಯನ್ನು ಮತ್ತೆ ಲೈಂಗಿಕಕ್ರಿಯೆಗೆ ಒತ್ತಾಯಿಸಿದ್ದ ಎಂದು ಆರೋಪಿಸಲಾಗಿದೆ. ಈ ನಿರಂತರ ಕಿರುಕುಳದ ನಂತರ, ಮಹಿಳೆ ಅಂತಿಮವಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಓರ್ವನ ಬಂಧನ

ಆರೋಪಿಗಳನ್ನು ಹಿರಾಲಾಲ್ ಕೇದಾರ್ ಮತ್ತು ರವಿ ಪವಾರ್ ಎಂದು ಗುರುತಿಸಲಾಗಿದೆ. ಮಹಿಳೆಗೆ ಕೇಕ್‌ನಲ್ಲಿ ಮಾದಕ ದ್ರವ್ಯ ಬೆರೆಸಿ , ನಂತರ ಹಿರಾಲಾಲ್ ಕೇದಾರ್ ಮತ್ತು ರವಿ ಪವಾರ್ ಎಂಬುವವರು ಕಾರಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೇದಾರ್ ನನ್ನು ಬಂಧಿಸಲಾಗಿದ್ದು, ಪವಾರ್ ಪರಾರಿಯಾಗಿದ್ದಾನೆ.

ಇಬ್ಬರು ಆರೋಪಿಗಳು ಮಹಿಳೆಯ ಅಶ್ಲೀಲ ವೀಡಿಯೊವನ್ನು ರೆಕಾರ್ಡ್ ಮಾಡಿ ಪದೇ ಪದೇ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಿರುಕುಳ ಸಹಿಸಲಾಗದೆ, ಅವರು ಡಿಸೆಂಬರ್ 5 ರಂದು ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ, ಆದರೆ ಎರಡನೆಯ ಆರೋಪಿ ಪರಾರಿಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಏನಿದು ಘಟನೆ?

ಥಾಣೆ ಜಿಲ್ಲಾ ಸೆಷನ್ಸ್ ಮತ್ತು ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಮಹಿಳೆಯೊಬ್ಬರಿಗೆ ಇಬ್ಬರು ಪುರುಷರು ಮಾದಕ ದ್ರವ್ಯ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಘಟನೆ ಆಗಸ್ಟ್ 2024 ರಲ್ಲಿ ನಡೆದಿತ್ತು. ಆದಾಗ್ಯೂ, ಇಬ್ಬರು ಆರೋಪಿಗಳು ತಾವು ರೆಕಾರ್ಡ್ ಮಾಡಿದ ವೀಡಿಯೊವನ್ನು ಬಳಸಿಕೊಂಡು ತಿಂಗಳುಗಟ್ಟಲೆ ಆಕೆಗೆ ಪದೇ ಪದೇ ಬ್ಲ್ಯಾಕ್‌ಮೇಲ್ ಮಾಡುತ್ತಲೇ ಇದ್ದ ನಂತರ, ಮಹಿಳೆ ಡಿಸೆಂಬರ್ 5, 2025 ರಂದು ದೂರು ದಾಖಲಿಸಿದ್ದಾರೆ.

ಆಗಸ್ಟ್ 25, 2024 ರಂದು ಹಿರಾಲಾಲ್ ಕೇದಾರ್ ಮತ್ತು ರವಿ ಪವಾರ್ ಎಂದು ಗುರುತಿಸಲಾದ ಇಬ್ಬರು ಆರೋಪಿಗಳು, ಮಹಿಳೆಯ ಹುಟ್ಟುಹಬ್ಬವನ್ನು ಆಚರಿಸುವ ನೆಪದಲ್ಲಿ ನ್ಯಾಯಾಲಯದ ಪಾರ್ಕಿಂಗ್ ಪ್ರದೇಶಕ್ಕೆ ಮಹಿಳೆಯನ್ನು ಕರೆದು ಆಕೆಗೆ ಮಾದಕ ದ್ರವ್ಯ ಸೇವಿಸಿದ ಕೇಕ್ ನೀಡಿದ್ದರು. ಮಹಿಳೆ ಅಸ್ವಸ್ಥಳಾದ ನಂತರ, ಇಬ್ಬರೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎನ್ನಲಾಗಿದೆ.

ಬ್ಲಾಕ್ ಮೇಲ್

ಆರೋಪಿಗಳು ಅಷ್ಟಕ್ಕೇ ಸುಮ್ಮನಾಗದೇ ತಮ್ಮ ಕೃತ್ಯವನ್ನು ವಿಡಿಯೋ ಮಾಡಿಕೊಂಡು ಆ ವಿಡಿಯೋ ತೋರಿಸಿ ಮಹಿಳೆಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ಆರೋಪಿಗಳ ಕಿರುಕುಳವನ್ನು ಸಹಿಸಲಾಗದೆ, ಅವರು ಡಿಸೆಂಬರ್ 5 ರಂದು ಥಾಣೆ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಎಫ್‌ಐಆರ್ ದಾಖಲಿಸಿದರು.

ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಒಬ್ಬ ಆರೋಪಿ ಅಂದರೆ ಹಿರಾಲಾಲ್ ಅವರನ್ನು ಬಂಧಿಸಿದ್ದಾರೆ. ಆದರೆ ರವಿ ಪವಾರ್ ಪರಾರಿಯಾಗಿದ್ದಾನೆ. ಆತನನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries