ಮುಸ್ಲಿಂ ವಿವಾಹ (ವಿಚ್ಛೇದನ ಸಂದರ್ಭದಲ್ಲಿ ಹಕ್ಕುಗಳ ರಕ್ಷಣೆ ಕಾಯ್ದೆ)-1986ರ ನಿಬಂಧನೆಯನ್ನು ಅನ್ವಯಿಸಿ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಹಾಗೂ ಎನ್.ಕೆ.ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ, ಮಾವನ ಮನೆಯವರು ನೀಡಿದ ಉಡುಗೊರೆಗಳನ್ನು ಉಳಿಸಿಕೊಳ್ಳಲು ಅವಕಾಶ ನೀಡಿದ ಕೊಲ್ಕತ್ತಾ ಹೈಕೋರ್ಟ್ ತೀರ್ಪನ್ನು ರದ್ದುಪಡಿದೆ.
"ಭಾರತದ ಸಂವಿಧಾನ ಎಲ್ಲರ ಆಕಾಂಕ್ಷೆಗಳನ್ನು ಅಂದರೆ ಸಮಾನತೆಯನ್ನು ನಿರ್ದಿಷ್ಟಪಡಿಸಿದೆ; ಆದರೆ ಅದನ್ನು ಇನ್ನೂ ಸಾಧಿಸಲು ಸಾಧ್ಯವಾಗಿಲ್ಲ. ಇದನ್ನು ಕೊನೆಗೊಳಿಸುವ ಪ್ರಯತ್ನವಾಗಿ ನ್ಯಾಯಾಲಯಗಳು ಸಾಮಾಜಿಕ ನ್ಯಾಯ ನಿರ್ಣಯದಲ್ಲಿ ಸಕಾರಣವನ್ನು ಪರಿಗಣಿಸಬೇಕು. ಈ ಪ್ರಕರಣದಲ್ಲಿ 1986ರ ಕಾಯ್ದೆಯ ವ್ಯಾಪ್ತಿ ಮತ್ತು ಗುರಿ ವಿಚ್ಛೇದಿತ ಮುಸ್ಲಿಂ ಮಹಿಳೆಯ ಘನತೆ ಮತ್ತು ಹಣಕಾಸು ಸಂರಕ್ಷಣೆಯಾಗಿದೆ. ಇದು ಸಂವಿಧಾನದ 21ನೇ ವಿಧಿಯಡಿ ನೀಡಿರುವ ಮಹಿಳೆಯ ಹಕ್ಕಿಗೆ ಅನುಸಾರವಾಗಿದೆ" ಎಂದು ಸ್ಪಷ್ಟಪಡಿಸಿದೆ.
"ಈ ಕಾಯ್ದೆಯ ಸಂರಚನೆಯಲ್ಲಿ ಸಮಾನತೆ, ಘನತೆ ಮತ್ತು ಸ್ವಾಯತ್ತತೆಯೇ ಮೂಲ. ಅದರಲ್ಲೂ ಮುಖ್ಯವಾಗಿ ಪಿತೃಪ್ರಧಾನ ವ್ಯವಸ್ಥೆಯೇ ಜಾರಿಯಲ್ಲಿರುವ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಇದು ಅಗತ್ಯ" ಎಂದು ಪ್ರತಿಪಾದಿಸಲಾಗಿದೆ.




