HEALTH TIPS

ಬಂಧಿತ ಉಕ್ರೇನಿಯನ್ ಮಕ್ಕಳನ್ನು ತಕ್ಷಣ ಹಿಂದಿರುಗಿಸಿ: ರಶ್ಯಕ್ಕೆ ವಿಶ್ವಸಂಸ್ಥೆ ಆಗ್ರಹ

ವಿಶ್ವಸಂಸ್ಥೆ: ರಶ್ಯಕ್ಕೆ ಬಲವಂತವಾಗಿ ವರ್ಗಾಯಿಸಲ್ಪಟ್ಟ ಉಕ್ರೇನ್‍ನ ಮಕ್ಕಳನ್ನು ತಕ್ಷಣ ಬೇಷರತ್ತಾಗಿ ಮರಳಿಸುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಬುಧವಾರ ಆಗ್ರಹಿಸಿದೆ.

ಈ ಕುರಿತ ನಿರ್ಣಯವನ್ನು ಸಾಮಾನ್ಯ ಸಭೆ 91-12 ಮತಗಳಿಂದ ಅಂಗೀಕರಿಸಿದ್ದು 57 ಸದಸ್ಯರು ಗೈರು ಹಾಜರಾಗಿದ್ದರು.

ಬಲವಂತವಾಗಿ ವರ್ಗಾಯಿಸಲಾದ ಅಥವಾ ಗಡೀಪಾರು ಮಾಡಲಾದ ಉಕ್ರೇನ್‍ನ ಎಲ್ಲಾ ಮಕ್ಕಳು ತಕ್ಷಣ, ಸುರಕ್ಷಿತವಾಗಿ ಮತ್ತು ಬೇಷರತ್ತಾಗಿ ಬಿಡುಗಡೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವಂತೆ ನಿರ್ಣಯವು ರಶ್ಯವನ್ನು ಆಗ್ರಹಿಸಿದೆ. ಅಲ್ಲದೆ, ಬಲವಂತದ ವರ್ಗಾವಣೆ, ಗಡೀಪಾರು, ಕುಟುಂಬಗಳಿಂದ ಮತ್ತು ಪಾಲಕರಿಂದ ಬೇರ್ಪಡುವಿಕೆ, ವೈಯಕ್ತಿಕ ಸ್ಥಾನಮಾನದಲ್ಲಿ ಬದಲಾವಣೆ, ಪೌರತ್ವ, ದತ್ತು ಅಥವಾ ಸಾಕು ಕುಟುಂಬಗಳಲ್ಲಿ ನಿಯೋಜನೆ, ಅಪಹರಿಸಲಾದ ಉಕ್ರೇನ್ ಮಕ್ಕಳಿಗೆ ಬಲವಂತವಾಗಿ ರಶ್ಯದ ಸಂಸ್ಕøತಿಯನ್ನು ಉಪದೇಶಿಸುವುದು ಸೇರಿದಂತೆ ಯಾವುದೇ ಅಭ್ಯಾಸವನ್ನು ನಿಲ್ಲಿಸುವಂತೆ ನಿರ್ಣಯವು ರಶ್ಯವನ್ನು ಆಗ್ರಹಿಸಿದೆ.

2022ರ ಫೆಬ್ರವರಿಯಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ರಶ್ಯವು ಕನಿಷ್ಠ 20,000 ಉಕ್ರೇನ್‍ನ ಮಕ್ಕಳನ್ನು ಅಪಹರಿಸಿರುವುದಾಗಿ ಉಕ್ರೇನ್ ಆರೋಪಿಸಿದೆ. ಇತಿಹಾಸದಲ್ಲೇ ಸರಕಾರದ ಅತೀ ದೊಡ್ಡ ಅಪಹರಣಕ್ಕೆ ರಶ್ಯ ಹೊಣೆಯಾಗಿದೆ. ಇದುವರೆಗೆ 1,850ಕ್ಕೂ ಅಧಿಕ ಮಕ್ಕಳನ್ನು ಪತ್ತೆಹಚ್ಚಿ ಮನೆಗೆ ಹಿಂತಿರುಗಿಸಲಾಗಿದೆ. ಉಕ್ರೇನ್‍ನ ಎಲ್ಲಾ ಮಕ್ಕಳೂ ತಕ್ಷಣ ಮತ್ತು ಬೇಷರತ್ತಾಗಿ ದೇಶಕ್ಕೆ ಹಿಂತಿರುಗವವರೆಗೆ ಉಕ್ರೇನ್‍ನಲ್ಲಿ ಶಾಂತಿ, ನೆಮ್ಮದಿ ಇರುವುದಿಲ್ಲ ಎಂದು ಉಕ್ರೇನ್‍ನ ಸಹಾಯಕ ವಿದೇಶಾಂಗ ಸಚಿವೆ ಮರಿಯಾನಾ ಬೆಟ್ಸಾ ನಿರ್ಣಯವನ್ನು ಮತಕ್ಕೆ ಹಾಕುವುದಕ್ಕೂ ಮುನ್ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನುದ್ದೇಶಿಸಿ ಹೇಳಿದರು.

ಕೆಲವು ಮಕ್ಕಳನ್ನು ಅವರ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಯುದ್ಧ ವಲಯದಿಂದ ಕೊಂಡೊಯ್ಯಲಾಗಿದೆ ಎಂದು ರಶ್ಯ ಒಪ್ಪಿಕೊಂಡಿದೆ. ಆದರೆ ನಿರ್ಣಯವು ಸಂಪೂರ್ಣ ಹುಸಿ ಆರೋಪಗಳಿಂದ ಕೂಡಿದೆ ಎಂದು ವಿಶ್ವಸಂಸ್ಥೆಗೆ ರಶ್ಯದ ಉಪ ರಾಯಭಾರಿ ಮರಿಯಾ ಝಬೊಲೊಟ್‍ಸ್ಕಾಯಾ ಟೀಕಿಸಿದ್ದು ನಿರ್ಣಯದ ಪರ ಚಲಾವಣೆಗೊಂಡ ಪ್ರತೀ ಮತವೂ ಸುಳ್ಳು, ಯುದ್ಧ ಮತ್ತು ಮುಖಾಮುಖಿಗೆ ಬೆಂಬಲವಾಗಿದೆ. ವಿರುದ್ಧದ ಪ್ರತಿಯೊಂದು ಮತವೂ ಶಾಂತಿಯ ಪರ ಧ್ವನಿಯಾಗಿದೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಕಪ್ಪುಪಟ್ಟಿಯಲ್ಲಿ ರಶ್ಯದ ಸೇನೆ:

2023ರಿಂದಲೂ ರಶ್ಯದ ಸೇನೆಯು (ವಿಶೇಷವಾಗಿ ಉಕ್ರೇನಿಯನ್ ಮಕ್ಕಳ ಅಪಹರಣದ ಕಾರಣ) ಸಂಘರ್ಷದ ಪ್ರದೇಶಗಳಲ್ಲಿ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ಜವಾಬ್ದಾರಿಯುತ ದೇಶಗಳನ್ನು ಹೆಸರಿಸುವ ವಿಶ್ವಸಂಸ್ಥೆಯ ಕಪ್ಪುಪಟ್ಟಿಯಲ್ಲಿದೆ. ಅದೇ ವರ್ಷ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವು(ಐಸಿಸಿ) ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಬಂಧನ ವಾರಾಂಟ್ ಹೊರಡಿಸಿದೆ. ಉಕ್ರೇನಿಯನ್ ಮಕ್ಕಳನ್ನು ರಶ್ಯಕ್ಕೆ ಕಾನೂನುಬಾಹಿರವಾಗಿ ಗಡೀಪಾರು ಮಾಡುವ ಯುದ್ದಾಪರಾಧದ ಜವಾಬ್ದಾರಿಯನ್ನು ಅವರು ಹೊರುತ್ತಾರೆ ಎಂದು ಐಸಿಸಿ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries