ಸಮರಸ ಚಿತ್ರಸುದ್ದಿ: ಬದಿಯಡ್ಕ: ಶ್ರೀ ಎಡನೀರು ಮಠ ಹಾಗೂ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಮೇಲಿನ ಭಕ್ತಿಯಿಂದ 'ಸತ್ ಸಂಗಮ' ಎಂಬ ಗಾನವನ್ನು ರಚಿಸಿದ ಅಹಮದ್‍ಕೊಯ ಮಾಸ್ಟರ್ ಹಾಗೂ ತಂಡದವರು ಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು. ತಂಡ ಸದಸ್ಯರನ್ನು ಶ್ರೀಗಳು ಶಾಲುಹೊದಿಸಿ, ಸ್ಮರಣಕೆ ನೀಡಿ ಅಭಿನಂದಿಸಿದರು.





