ನವದೆಹಲಿ: ಕಳೆದೊಂದು ವರ್ಷದಿಂದ ವಿಳಂಬವಾಗುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುರುಕು ಪಡೆದಿದ್ದು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಪ್ರಮುಖರು ಬುಧವಾರ ಸಭೆ ನಡೆಸಿದ್ದಾರೆ.
ಈ ವೇಳೆ ರಾಷ್ಟ್ರಾಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆಯಾಗಿದೆ ಎಂದು ವರದಿಯಾಗಿದೆ.
ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾ ಅಧಿಕಾರವಧಿ 2024ರಲ್ಲಿಯೇ ಅಂತ್ಯ
ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾ ಅಧಿಕಾರವಧಿ 2024ರಲ್ಲಿಯೇ ಅಂತ್ಯವಾಗಿತ್ತು. ಆದರೂ ನಾನಾ ಕಾರಣದಿಂದ ಅವರೇ ಮುಂದುವರಿದಿದ್ದಾರೆ. ಆದರೆ ಇನ್ನು ವಿಳಂಬ ಬೇಡ ಎಂಬ ನಿಲುವು ಉನ್ನತ ನಾಯಕರದ್ದು. ಹೀಗಾಗಿ ಮೋದಿ, ಸಂತೋಷ್, ಶಾ ಬುಧವಾರದ ಸಭೆಯಲ್ಲಿ ಚರ್ಚಿಸಿದ್ದಾರೆ. ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಯನ್ನು ಶೀಘ್ರ ಘೋಷಿಸಿ ನಂತರ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ ಮಾಡುವ ಇರಾದೆ ಇದೆ ಎಂದು ಗೊತ್ತಾಗಿದೆ.
ನಿರ್ಮಲಾ ಸೀತಾರಾಮನ್‌ಗೆ ಅದೃಷ್ಟ ಸಂಭವ
ಅಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಧರ್ಮೇಂದ್ರ ಪ್ರಧಾನ್, ಭೂಪೇಂದ್ರ ಯಾದವ್, ವಿ.ಡಿ. ಶರ್ಮಾ, ವಿನೋದ್ ತಾವ್ಡೆ, ದೇವೇಂದ್ರ ಫಡ್ನವೀಸ್, ನಿರ್ಮಲಾ ಸೀತಾರಾಮನ್ ಹೆಸರು ಕೇಳಿ ಬರುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವಧಿ 2024ರಲ್ಲೇ ಮುಕ್ತಾಯ
ಕಳೆದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡ್ಡಾ ಅವಧಿ ವಿಸ್ತರಿಸಲಾಗಿತ್ತು
ಇದೀಗ ಪಕ್ಷದ ಬಹುತೇಕ ರಾಜ್ಯಗಳ ಅಧ್ಯಕ್ಷರ ಆಯ್ಕೆ ಮುಕ್ತಾಯ ಆದ ಹಿನ್ನೆಲೆ
ನೂತನ ಅಧ್ಯಕ್ಷರ ಆಯ್ಕೆಗೆ ಮೋದಿ, ಶಾ, ನಡ್ಡಾ ನೇತೃತ್ವದಲ್ಲಿ ಮಹತ್ವದ ಸಭೆ
ರೇಸಲ್ಲಿ ಪ್ರಧಾನ್, ಚೌಹಾಣ್, ವಿನೋದ್ ತಾವ್ಡೆ, ದೇವೇಂದ್ರ ಫಡ್ನವೀಸ್
ಮಹಿಳೆ ಆಯ್ಕೆಗೆ ಮುಂದಾದರೆ ನಿರ್ಮಲಾ ಸೀತಾರಾಮನ್‌ಗೆ ಅದೃಷ್ಟ ಸಂಭವ




