ಕಾಸರಗೋಡು: ನಗರದ ಜನರಲ್ ಆಸ್ಪತ್ರೆಯಲ್ಲಿ ಎರಡು ತಂಡಗಳ ಮಧ್ಯೆ ನಡೆದ ಹೊಡೆದಾಟಕ್ಕೆ ಸಂಬಂಧಿಸಿ ನಗರ ಠಾಣೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ. ಮಾಙËಡ್ ನಿವಾಸಿ ಟಿ.ಪಿ ಶಬೀರಲಿ, ಚೆಮ್ನಾಡ್ ಕೊಂಬನಡ್ಕ ನಿವಾಸಿ ಕೆ. ಜಗದೀಶ್ ಕುಮಾರ್, ಅಹಮ್ಮದ್ ಶಾನವಾಸ್, ಸಿ.ಕೆ ಅಜೇಶ್, ಅಬ್ದುಲ್ ಸಫೀರ್, ಮಹಮ್ಮದ್ ಅಫ್ನಾನ್, ಸಯ್ಯದ್ ಆಫ್ರೀದ್ ಹಾಗೂ ಡಿ.ಎಂ ಕುಞಹಮ್ಮದ್ ಎಂಬವರಿಗೆ ಈ ಕೇಸು. ಆಸ್ಪತ್ರೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದ ವೈದ್ಯರ ದೂರಿನ ಮೇರೆಗೆ ಈ ಕೇಸು ದಾಖಲಾಗಿದೆ.
ಕೀಯೂರಿನಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಇಲ್ಲಿ ಎರಡೂ ತಂಡಗಳ ಮಧ್ಯೆ ವಾಗ್ವಾದ ನಡೆದು, ಘರ್ಷಣೆಗೆ ಕಾರಣವಾಗಿದೆ. ತಂಡಗಳ ನಡುವಿನ ಹೊಡೆದಾಟದಿಂದ ಆಸ್ಪತ್ರೆ ಸಿಬ್ಬಂದಿ ಕರ್ತವ್ಯಕ್ಕೂ ಅಡಚಣೆಯುಂಟಾಗಿತ್ತು. ತಕ್ಷಣಪೊಲೀಸರು ಸ್ಥಳಕ್ಕಾಗಮಿಸಿ ಎಂಟುಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.
ಕೀಯೂರಿನಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿ ಮೇಲ್ಪರಂಬ ಠಾಣೆ ಪೊಲೀಸರು ಒಟ್ಟು 14 ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು.




