ಕಾಸರಗೋಡು: ಎದೆಹಾಲು ಗಂಟಲಲ್ಲಿ ಸಿಲುಕಿ ಎಂಟು ದಿವಸ ಪ್ರಾಯದ ಹಸುಳೆ ಮೃತಪಟ್ಟಿದೆ. ಜಿಲ್ಲೆಯ ಕಿನಾನೂರ್ ಕರಿಂದಳಂ ಎಂಬಲ್ಲಿನ ಕಾಳಿಯಾನತ್ತ್ ನಿವಾಸಿ ಅಮೃತಾ ಎಂಬವರ ಮಗು ಮೃತಪಟ್ಟ ಹಸುಳೆ. ಸೋಮವಾರ ಬೆಳಗ್ಗೆ ಘಟನೆ ನಡೆದಿದೆ.
ಎದೆಹಾಲು ಸೇವನೆ ಬಳಿಕ ಮಗುವಿಗೆ ಉಸಿರಾಟ ಸಮಸ್ಯೆ ಕಂಡು ಬಂದಿದ್ದು, ತಕ್ಷಣ ಕಾಞಂಗಾಡಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಮಗು ಶ್ವಾಸಕೋಶ ಸಂಬಂಧಿ ಅಸೌಖ್ಯದಿಂದ ಬಳಲುತ್ತಿದ್ದು, ಎದೆಹಾಲುಣಿಸಿದ ನಂತರ ಸೂಕ್ತ ಪರಿಪಾಲನೆ ನಡೆಸದಿರುವುದರಿಂದ ಉಸಿರಾಟದ ಸಮಸ್ಯೆ ಉಲ್ಬಣಗೊಂಡಿತ್ತೆನ್ನಲಾಗಿದೆ. ಮಗುವಿನ ಅಸಹಜ ಸಾವಿನ ಬಗ್ಗೆ ಪೊಲಿಸರುಕೇಸು ದಾಖಲಿಸಿಕೊಂಡಿದ್ದಾರೆ.

