HEALTH TIPS

Vb-G Ram G Bill | ನರೇಗಾ ಹಣ ಲೂಟಿ ಮಾಡುತ್ತಿದ್ದವರಿಗಷ್ಟೇ ನೋವು: ಸಿಂಧಿಯಾ

ಇಂದೋರ್‌: ವಿಬಿ-ಜಿ-ರಾಮ್‌ ಜಿ ಮಸೂದೆಯು ದೇಶದ ಹಿತಾಸಕ್ತಿ. ನರೇಗಾ ಕಾಯ್ದೆಯಡಿಯಲ್ಲಿ ಫಲಾನುಭವಿಗಳ ಕೂಲಿ ಹಣವನ್ನು ಲೂಟಿ ಮಾಡುತ್ತಿದ್ದವರಿಗಷ್ಟೇ ಮಸೂದೆಯ ಅನುಷ್ಠಾನದಿಂದ ನೋವಾಗಿದೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.

ಹೊಸ ಮಸೂದೆಯು ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲಿದೆ.

ಇದರಿಂದ ರೈತರು ಮತ್ತು ಯುವಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರ ಟೀಕೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದ ಅವರು 'ಅವರು ವಿರೋಧ ಪಕ್ಷಗಳ ನಾಯಕರಾಗಿದ್ದರೆ ಕನಿಷ್ಠ ಸಂಸತ್ತಿನಲ್ಲಿ ಇರಬೇಕು' ಎಂದು ಹೇಳಿದರು.

'ಕಾಂಗ್ರೆಸ್‌ ನರೇಗಾ ಯೋಜನೆ ಜಾರಿ ಮಾಡಿದಾಗ ₹10000 ಕೋಟಿಯನ್ನೂ ಮೀಸಲಿಡುತ್ತಿರಲಿಲ್ಲ. ಆದರೆ ವಿಬಿ-ಜಿ-ರಾಮ್‌ ಜಿ ಮಸೂದೆಯು ₹1 ಲಕ್ಷ ಕೋಟಿಗಿಂತ ಅಧಿಕ ಹಣವನ್ನು ಒದಗಿಸುತ್ತಿದೆ. ಇದು ಗ್ರಾಮೀಣ ಜನರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ' ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries