ಕುಂಬಳೆ: ಇತಿಹಾಸ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಮದಿಗೆ ಜ.14 ರಿಂದ 18ರ ವರೆಗೆ ನಡೆಯಲಿದೆ.
ಜ.14 ರಂದು ಬೆಳಿಗ್ಗೆ 8 ರಿಂದ ಕೆ.ವಿ.ರಾಜನ್ ಮಾರಾರ್ ಪಯ್ಯನ್ನೂರು ತಮಡದವರಿಂದ ಸೋಪಾನ ಸಂಗೀತ, 9.30 ರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, 10 ರಿಂದ ಶ್ರೀಬಲಿ, ಧ್ವಜಾರೋಹಣ, ತುಲಾಭಾರ ಸೇವೆ, ಮಹಾಪೂಜೆ, ನಿತ್ಯಬಲಿ, ಅನ್ನದಾನ ನಡೆಯಲಿದೆ. ಸಂಜೆ 5ಕ್ಕೆ ನಡೆ ತೆರೆಯುವುದು, 5.15 ರಿಂದ ಕೂಡ್ಲು ಕುತ್ತಾಳ ಶ್ರೀಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದವರಿಂದ ಯಕ್ಷಗಾನ ಬಯಲಾಟ, 6.30ಕ್ಕೆ ದೀಪಾರಾಧನೆ, ರಾತ್ರಿ 7.30 ರಿಂದ ರಂಗಪೂಜೆ, ಉತ್ಸವ ಶ್ರೀಭೂತಬಲಿ ನಡೆಯಲಿದೆ.
15 ರಂದು ಬೆಳಿಗ್ಗೆ 6 ರಿಂದ ಉತ್ಸವ ಶ್ರೀಬಲಿ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ನಿತ್ಯಬಲಿ, 12 ರಿಂದ ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು, 5.15 ರಿಂದ ವಿದ್ವಾನ್ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯವೃಂದದವರಿಂದ ಭರತನಾಟ್ಯ, ಕೂಚುಪುಡಿ ಹಾಗೂ ಜಾನಪದ ನೃತ್ಯ ಪ್ರದರ್ಶನ, ಸಂಜೆ 6.30ಕ್ಕೆ ದೀಪಾರಾಧನೆ, ರಾತ್ರಿ 7.30 ರಿಂದ ಪೂಜೆ, ಸಣ್ಣ ದೀಪೋತ್ಸವ, ಶ್ರೀಭೂತಬಲಿ ನಡೆಯಲಿದೆ.
16 ರಂದು ಬೆಳಿಗ್ಗೆ 6 ರಿಂದ ಉತ್ಸವ ಶ್ರೀಬಲಿ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, ಶ್ರೀಬಲಿ, 12 ರಿಂದ ಅನ್ನದಾನ, ಮಧ್ಯಾಹ್ನ 2 ರಿಂದ ಶೇಡಿಕಾಪು ಪಾರ್ತಿಸುಬ್ಬ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4.30ಕ್ಕೆ ನಡೆ ತೆರೆಯುವುದು, 4.30 ರಿಂದ ಪುತ್ತೂರಿನ ವೈಷ್ಣವಿ ನಾಟ್ಯಾಲಯದ ಕುಂಬಳೆ ಶಾಖೆಯ ವಿದ್ಯಾರ್ಥಿಗಳಿಂದ ರಜತ ನೃತ್ಯಯಾನ, 5. ರಿಂದ 6ರ ತನಕ ಭಜನೆ, 6.30ಕ್ಕೆ ವಿಶ್ವರೂಪ ದರ್ಶನ, ರಾತ್ರಿ 7.30 ರಿಂದ ಪೂಜೆ, ನಡುದೀಪೋತ್ಸವ, ಶ್ರೀಭೂತಬಲಿ ನಡೆಯಲಿದೆ.
17 ರಂದು ಬೆಳಿಗ್ಗೆ 6 ರಿಂದ ಉತ್ಸವ ಶ್ರೀಬಲಿ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, 12 ರಿಂದ ಅನ್ನದಾನ, ಸಂಜೆ 4.ಕ್ಕೆ ನಡೆ ತೆರೆಯುವುದು, 4.30ರಿಂದ ವಿದುಷಿಃ ಡಾ.ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯವೃಂದದವರಿಂದ ನೃತ್ಯ ಸಂಭ್ರಮ, 6. ರಿಂದ 6.30ರ ತನಕ ತಾಯಂಬಕ, 6.30ಕ್ಕೆ ದೀಪಾರಾಧನೆ, ರಾತ್ರಿ 7.30 ರಿಂದ ಪೂಜೆ, ಶ್ರೀಭೂತಬಲಿ ಉತ್ಸವ, ರಾತ್ರಿ 9.45 ರಿಂದ ವಿಶೇಷ ಬೆಡಿ ಪ್ರದರ್ಶನ ನಂತರ ಉತ್ಸವ ಬಲಿ, ಶಯನ, ಕವಾಟ ಬಂಧನ ನಡೆಯಲಿದೆ.
18 ರಂದು ಬೆಳಿಗ್ಗೆ 6 ರಿಂದ ಕವಾಟೋದ್ಘಾಟನೆ, 10.30 ರಿಂದ ತುಲಾಭಾರ ಸೇವೆ, 12.30ಕ್ಕೆ ಮಹಾಪೂಜೆ, 12 ರಿಂದ ಅನ್ನದಾನ, ಅಪರಾಹ್ನ 3.30 ರಿಂದ ಉತ್ಸವ ಬಲಿ, ಘೋಷಯಾತ್ರೆ, ಶೇಡಿಗುಮ್ಮೆಯಲ್ಲಿ ಅವಭೃತಸ್ನಾನ, ಸಂಜೆ 4 ರಿಂದ ಯಕ್ಷಮಿತ್ರರು ಮುಜುಂಗಾವು ತಂಡದವರಿಂದ ಯಕ್ಷಗಾನ ಬಯಲಾಟ, ರಾತ್ರಿ 7.30 ರಿಂದ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಧ್ವಜಾವರೋಹಣ ನಡೆಯಲಿದೆ.
19 ರಂದು ಬೆಳಿಗ್ಗೆ 7.30ಕ್ಕೆ ಬೆಳಿಗ್ಗಿನ ಪೂಜೆ, 10 ರಿಂದ ಶ್ರೀದೇವರಿಗೆ ಪಂಚಾಮೃತ ಮತ್ತು ಎಳನೀರು ಅಭಿಷೇಕ, 12.30ಕ್ಕೆ ಮಹಾಪೂಜೆ, ಶ್ರೀಬಲಿ, 12 ರಿಂದ ಅನ್ನದಾನ, ಸಂಜೆ 6.30ಕ್ಕೆ ದೀಪಾರಾಧನೆ, 6.30 ರಿಂದ 7.30ರ ತನಕ ಭಜನೆ, ರಾತ್ರಿ 7.30 ರಿಂದ ಮಹಾಪೂಜೆ, ಶ್ರೀಭೂತಬಲಿ ಉತ್ಸವ ನಡೆಯಲಿದೆ.

