ಕುಂಬಳೆ: ಅಬಕಾರಿ ಎನ್‍ಫೋರ್ಸ್‍ಮೆಂಟ್ ಅಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆಟೋರಿಕ್ಷಾದಲ್ಲಿ ಸಗಿಸುತ್ತಿದ್ದ 146.88ಲೀ. ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ವಶಪಡಿಸಿಕೊಂಡು, ಒಬ್ಬನನ್ನು ಬಂಧಿಸಿದ್ದಾರೆ.
ಮಂಜೇಶ್ವರ ಕುಂಜತ್ತೂರು ನಿವಾಸಿ ಪ್ರಶಾಂತ್ ಬಿ. ಬಂಧಿತ.ಈತನ ವಿರುದ್ಧ ಪ್ರಕರಣ ದಾಖಲಿಸಿ, ಅಬಕಾರಿ ಕುಂಬಳೆ ರೇಂಜ್ ಅಧಿಕಾರಿಗಳ ವಶಕ್ಕೊಪ್ಪಿಸಲಾಗಿದೆ. ಸ್ಪೆಶ್ಯಲ್ ಸ್ಕ್ವೇಡ್ ಪ್ರಿವೆಂಟಿವ್ ಅಧಿಕಾರಿ ಕೆ.ವಿ ರಂಜಿತ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ.

