ಮಂಜೇಶ್ವರ: ಮಾದಕವಸ್ತು ವಿರೋಧಿ ಕಾರ್ಯಾಚರಣೆಯನ್ವಯ ಮಂಜೇಶ್ವರ ಠಾಣೆ ಪೊಲೀಸರು ನಡೆಸಿದ ದಾಳಿಯಲ್ಲಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರ ವಶದಲ್ಲಿದ್ದ ಮಾರಕ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಕುಂಜತ್ತೂರು ಅಡ್ಕಪದವು ಎಂಬಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ತಲಪ್ಪಾಡಿ ಕೆ.ಸಿ ರೋಡ್ ನಿವಾಸಿ ಅಬ್ದುಲ್ ರಹಮಾನ್ ಫೈಸಲ್ ಎಂಬಾತನನ್ನುಬಂಧಿಸಿ ಈತನ ವಶದಲ್ಲಿದ್ದ 0.9ಗ್ರಾಂ ಎಂಡಿಎಂಎ, ಅಡ್ಕ ಬೈದಲ ನಿವಾಸಿ ಅಬೂಬಕ್ಕರ್ ಬದ್ರುದ್ದೀನ್ ಎಂಬಾತನನ್ನು ಬಂಧಿಸಿ ಈತನ ವಶದಲ್ಲಿದ್ದ 0.27ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಗಾಂಜಾ ಸಿಗರೇಟು ಸೇದುತ್ತಿದ್ದ ಮಹಮ್ಮದ್ ಅನ್ಸಾರ್ ಹಾಗೂ ಶಿರಿಯದ ಅಬ್ದುಲ್ ಮುನೀರ್ ಎಂಬರನ್ನು ಬಂಧಿಸಲಾಗಿದೆ.

